ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ಗಳ ಮಾರಾಟ
ನವದೆಹಲಿ: ಐಪಿಎಲ್ ಏಳನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳು ಯುಎಇಯಲ್ಲಿ ನಡೆಯಲಿದ್ದು, ಈ ಪಂದ್ಯಗಳಿಗೆ ಕಾಳಸಂತೆಯಲ್ಲಿ ಅಂತರ್ಜಾಲಗಳ ಮೂಲಕ ಟಿಕೆಟ್ ಅನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ.
ಐಪಿಎಲ್ ಪಂದ್ಯಾವಳಿ ಹೆಚ್ಚು ಖ್ಯಾತಿ ಪಡೆದಿರುವ ಹಿನ್ನಲೆಯಲ್ಲಿ ವೆಬ್ಸೈಟ್ ಈ ಬಾರಿಯ ಟಿಕೆಟ್ ದರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದೆ. ರು. 1308(80 ದಿರ್ಹಾಮ್) ಮೊತ್ತದ ಟಿಕೆಟ್ ಅನ್ನು 24,527(1,500 ದಿರ್ಹಾಮ್)ಕ್ಕೆ ಮಾರಾಟ ಮಾಡಲಾಗುತ್ತಿದೆ. ಟಿಕೆಟ್ಗಳು ತೀವ್ರ ವೇಗದಲ್ಲಿ ಮಾರಾಟವಾಗುತ್ತಿದ್ದು,ಆರ್ಥಿಕ ಅಭಿವೃದ್ಧಿ ಇಲಾಖೆ ಈ ರೀತಿಯಾಗಿ ದುಬಾರಿ ಮೊತ್ತಕ್ಕೆ ಟಿಕೆಟ್ ಮಾರಾಟ ಕಾನೂನು ಬಾಹೀರ ಎಂದು ತಿಳಿಸಿದೆ.