ಚಾಂಪಿಯನ್ಸ್ ಚಾಲೆಂಜ್ಗಾಗಿ ಐರ್ಲೆಂಡ್ಗೆ ವನಿತೆಯರು
ನವದೆಹಲಿ: ಇದೇ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಎಫ್ಐಎಚ್ ಚಾಂಪಿಯನ್ಸ್ ಚಾಲೆಂಜ್ ಪಂದ್ಯಾವಳಿಯ ಪೂರ್ವ ಸಿದ್ಧತೆಗಾಗಿ ಭಾರತ ಮಹಿಳೆಯರ ಹಾಕಿ ತಂಡ ಬುಧವಾರ ರಾತ್ರಿ ಐರ್ಲೆಂಡ್ಗೆ ತೆರಳಿದೆ.
ಕಳೆದ ವಾರ ಪ್ರಕಟಿಸಲಾದ 18 ಆಟಗಾರ್ತಿಯರ ತಂಡ ಈ ಪ್ರವಾಸದಲ್ಲಿ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ಚಾಂಪಿಯನ್ಸ್ ಚಾಲೆಂಜ್ ಪಂದ್ಯಾವಳಿಗೂ ಮುನ್ನ ಆಟಗಾರ್ತಿಯರಿಗೆ ಹೆಚ್ಚಿನ ಅನುಭವ ನೀಡಲಿದೆ.
ಏ.27ರಿಂದ ಆರಂಭವಾಗಲಿರುವ ಈ ಪಂದ್ಯಾವಳಿಯಲ್ಲಿ ಭಾರತ ತಂಡದ ಸಾರಥ್ಯವನ್ನು ಮಿಡ್ಫೀಲ್ಡರ್ ರಿತು ರಾಣಿ ವಹಿಸಿಕೊಳ್ಳುತ್ತಿದ್ದು, ಮತ್ತೊರ್ವ ಮಿಡ್ಫೀಲ್ಡರ್ ಚಂಚಣ್ ದೇವಿ ಉಪನಾಯಕಿಯಾಗಿದ್ದಾರೆ.
ಇನ್ನು ಪಂದ್ಯಾವಳಿಯ ವೇಳೆ ಯುವ ಆಟಗಾರ್ತಿಯರಾದ ನವ್ನೀತ್ ಕೌರ್ ಮತ್ತು ನೇಹಾ ಗೋಯಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ.
ಈ ಪ್ರವಾಸದ ಕುರಿತು ಮಾತನಾಡಿರುವ ತಂಡದ ಕೋಚ್ ನೀಲ್ ಹೌಗುಡ್, ಈ ಒಂದು ಅವಕಾಶಕ್ಕಾಗಿ ಭಾರತ ವನಿತೆಯರ ತಂಡ ಸಾಕಷ್ಟು ದಿನಗಳಿಂದ ಎದುರುನೋಡುತ್ತಿತ್ತು. ನಾವು ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ಸುಮಾರು 6 ತಿಂಗಳಾಗಿದ್ದು, ಮುಂಬರುವ ಕಾಮನ್ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯಾ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಲವು ಇದು ಮೊದಲ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಾಂಪಿಯನ್ ಚಾಲೆಂಜ್ ಪಂದ್ಯಾವಳಿಯಲ್ಲಿ ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತದ ಜತೆಗೆ ಕೊರಿಯಾ ಬೆಲ್ಜಿಯಂ ಮತ್ತು ಆತಿಥಏಯ ಸ್ಕಾಟ್ಲೆಂಡ್ ತಂಡಗಳು ಈ ಗುಂಪಿನಲ್ಲಿವೆ. ಇನ್ನು ಯುಎಸ್ಎ, ದಕ್ಷಿಣ ಆಫ್ರಿಕಾ, ಸ್ಪೇನ್ ಮತ್ತು ಐರ್ಲೆಂಡ್ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತಂಡ ಏ.27ರಂದು ತನ್ನ ಮೊದಲ ಪಂದ್ಯದಲ್ಲಿ ಕೊರಿಯಾ ತಂಡವನ್ನು ಎದುರಿಸಲಿದೆ.
ಭಾರತ ತಂಡ:
ಗೋಲ್ಕೀಪರ್ಗಳು: ಯೋಗಿತಾ ಬಾಲಿ, ಸವಿತಾ,
ಡಿಫರೆಂಡರ್: ದೀಪ್ ಗ್ರೇಸ್ ಎಕ್ಕಾ, ದೀಪಿಕಾ, ಸುನಿತಾ ಲಕ್ರಾ, ಕಿರಣ್ದೀಪ್ ಕೌರ್, ನಮಿತಾ ಟೊಪ್ಪೊ, ಮೋನಿಕಾ ಮಲಿಕ್.
ಮಿಡ್ಫೀಲ್ಡರ್: ಸುಶೀಲಾ ಚಾನು, ರಿತು ರಾಣಿ, ಲಿಲಿ ಚಾನು, ಚಂಚಣ್ ದೇವಿ, ಸೌಂದರ್ಯ್ ಯೆಂದಲಾ,
ಫಾರ್ವರ್ಡ್ಸ್: ಅನುರಾಧ ದೇವಿ, ಪೂನಮ್ ರಾಣಿ, ವಂದನಾ ಕಟಾರಿಯಾ, ನವ್ನೀತ್ ಕೌರ್, ನೇಹಾ ಗೋಯಲ್