ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೈನಲ್‌ಗೆ ಬೆಳಕಿನ ಅಡ್ಡಿ

Srinivasa Murthy VN
Updated On : 10 Apr 2014, 12:24 pm

ಬೆಂಗಳೂರು: ಮಂದ ಬೆಳಕು  ಅಡ್ಡಿ ಉಂಟುಮಾಡಿದ ಹಿನ್ನೆಲೆಯಲ್ಲಿ ಪಿಎಸ್‌ಪಿಬಿ ಅಂತರ್ ಘಟಕ ಟೆನಿಸ್ ಚಾಂಪಿಯನ್‌ಶಿಪ್‌ನ ಪುರುಷರ ತಂಡ ವಿಭಾಗದ ಫೈನಲ್ ಪಂದ್ಯ ಅರ್ಧಕ್ಕೆ ನಿಂತಿತು.
ಜಯದ ಹಾದಿಯನ್ನು ಮುಂದುವರಿಸಿದ ಸಾಕೆತ್ ಮೈನೆನಿ, ವಿ.ಎಂ ರಂಜೀತ್ ವಿರುದ್ಧ 6-1, 6-4 ಸೆಟ್‌ಗಳಿಂದ ಮೇಲುಗೈ ಸಾಧಿಸಿದರು.
ನಂತರ ಆರಂಭವಾದ ಎರಡನೇ ಪಂದ್ಯದ ಮೊದಲ ಸೆಟ್‌ನಲ್ಲಿ ಒಎನ್‌ಜಿಸಿ ಪರ ಆರ್. ರಾಮ್ ಕುಮಾರ್ ಅವರು ಪಂದ್ಯದಲ್ಲಿ ಜಿಎಐಎಲ್‌ನ ವಿಷ್ಣುವರ್ಧನ್ ವಿರುದ್ಧ 7-6 (7-0) ಅಂತರದಿಂದ ಮೇಲುಗೈ ಸಾಧಿಸಿದರು.
ನಂತರ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ವಿಷ್ಣುವರ್ಧನ್ 6-4 ಅಂತರದಿಂದ ಜಯ ಕಂಡುಕೊಳ್ಳುವ ಮೂಲಕ ಮೇಲುಗೈ ಸಾಧಿಸುತ್ತಿದ್ದಂತೆಯೇ ಪಂದ್ಯಕ್ಕೆ ಮಂದ ಬೆಳಕು ಅಡ್ಡಿಪಡಿಸಿತು. ಹೀಗಾಗಿ ಪಂದ್ಯದಲ್ಲಿ ಜಿಎಐಎಲ್ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಉಳಿದ ಪಂದ್ಯ ಗುರುವಾರ ಬೆಳಗ್ಗೆ ಆರಂಭವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement