ಭಾರತೀಯ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ವಿಸ್ಡನ್ ಗೌರವ
ವಿಸ್ಡನ್ಸ್ ಆಯ್ಕೆ ಮಾಡಿರುವ ವರ್ಷದ 5 ಕ್ರಿಕೆಟ್‌ರಗಳಲ್ಲಿ ಭಾರತದ ಶಿಖರ್ ಧವನ್ ಸ್ಥಾನ ಪಡೆದಿದ್ದಾರೆ.
ಲಂಡನ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ವಿಸ್ಡನ್ಸ್ ಆಯ್ಕೆ ಮಾಡಿರುವ ವರ್ಷದ ಐವರು ಕ್ರಿಕೆಟ್‌ರಗಳಲ್ಲಿ ಸ್ಥಾನ ಪಡೆದಿದ್ದಾರೆ. 2013ರಲ್ಲಿ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಗಾಗಿ ಧವನ್ ಅವರಿಗೆ ಈ ಗೌರವ ದೊರಕಿದೆ.
2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ 28 ವರ್ಷದ ಧವನ್ ಅವರು ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದ್ದರು. ಆಗ ಧವನ್ 90.75 ಸರಾಸರಿಯಲ್ಲಿ 363 ರನ್ ಗಳಿಸಿದ್ದರು. ಈ ಸಾಧನೆಯೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದರು.
ಆಸ್ಟ್ರೇಲಿಯಾದ ಕ್ರಿಸ್ ರೋಜರ್, ರೆಯಾನ್ ಹ್ಯಾರೀಸ್, ಇಂಗ್ಲೆಂಡ್‌ನ ಜಾಯ್ ರೂಟ್ ಹಾಗೂ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಚಾರ್ಲೋಟ್ಟೆ ಎಡ್ವರ್ಡ್ಸ್ ಅವರು ಈ ಗೌರವಕ್ಕೆ ಪಾತ್ರರಾದ ಇತರ ನಾಲ್ವರು ಆಟಗಾರರಾಗಿದ್ದಾರೆ. 2013ರಲ್ಲಿ ನಡೆದ ಆ್ಯಶಸ್ ಪಂದ್ಯಾವಳಿಗೆ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ಆರಂಭಿಕ ಆಟಗಾರ ರೋಜರ್ ಮತ್ತು ಬೌಲರ್ ಹ್ಯಾರೀಸ್ ಮತ್ತು ರೂಟ್ ಅವರನ್ನು ಪರಿಗಣಿಸಲಾಗಿದೆ. ಇನ್ನು ಎಡ್ವರ್ಡ್ಸ್ ಅವರು ಇತ್ತೀಚೆಗಷ್ಟೇ ನಡೆದ ವಿಶ್ವ ಟಿ20 ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡವನ್ನು ಫೈನಲ್‌ವರೆಗೆ ತಲುಪಿಸಿದ ಸಾಧನೆಗೆ ಗೌರವಕ್ಕೆ ಪಾತ್ರರಾಗಿದ್ದಾರೆ.2013ರಲ್ಲಿ 26 ಏಕದಿನ ಪಂದ್ಯಗಳನ್ನಾಡಿದ್ದ ಧವನ್ ಅವರು 1162 ರನ್ ಗಳಿಸಿದ್ದರು.