ಮುಂಬೈ ತಂಡಕ್ಕೆ ಸಚಿನ್ ಐಕಾನ್
ಮುಂಬೈ: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಐಪಿಎಲ್ನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ತನ್ನ ಐಕಾನ್ ಆಗಿ ಆಯ್ಕೆ ಮಾಡಿಕೊಂಡಿದೆ. ಏಪ್ರಿಲ್ 16ರಿಂದ ಐಪಿಎಲ್ನ 7ನೇ ಆವೃತ್ತಿ ಆರಂಭವಾಗುವ ಹಿನ್ನೆಲೆಯಲ್ಲಿ ಮುಂಬೈ ತಂಡ ಸಚಿನ್ ಅವರನ್ನು ನೇಮಕ ಮಾಡಿಕೊಂಡಿದೆ.
'ಮುಂಬೈ ಇಂಡಿಯನ್ಸ್ ತಂಡದ ಐಕಾನ್ ಆಗಿ ಸಚಿನ್ ಅವರನ್ನು ಹೊಂದಲು ತುಂಬು ಸಂತಸಪಡುತ್ತೇವೆ. ಇದು ತಂಡದಲ್ಲಿರುವ ಯುವ ಆಟಗಾರರಿಗೆ ಎಲ್ಲಿಲ್ಲದ ಸ್ಫೂರ್ತಿಯನ್ನು ತುಂಬಿದೆ. ಸಚಿನ್ ಮಾರ್ಗದರ್ಶನಕ್ಕೆ ಅವರೆಲ್ಲ ಕಾದಿದ್ದಾರೆ' ಎಂದು ಮುಂಬೈ ತಂಡದ ಮಾಲೀಕರಾದ ನೀತಾ ಅಂಬಾನಿ ತಿಳಿಸಿದರು. ಸಚಿನ್ ಅವರನ್ನು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಮುಂಬೈ ಇಂಡಿಯನ್ಸ್ ತಂಡದ ಐಕಾನ್ ಆಟಗಾರ ಎಂದು ಗುರುತಿಸಲಾಗಿದೆ.