ಅಸಫಾ ಪೊವೆಲ್ಗೆ 18 ತಿಂಗಳ ನಿಷೇಧ
ಜಮೈಕಾ: ಖ್ಯಾತ 100ಮೀ. ಸ್ಪಿಂಟರ್ ವಿಶ್ವ ದಾಖಲೆ ಹೊಂದಿದ್ದ, ಜಮೈಕಾದ ಓಟಗಾರ ಅಸಫಾ ಪೊವೆಲ್ ಅವರನ್ನು ಡೋಪಿಂಗ್ ಪ್ರಕರಣದ ಹಿನ್ನೆಲೆಯಲ್ಲಿ 18 ತಿಂಗಳ ಕಾಲ ನಿಷೇಧ ಹೇರಲಾಗಿದೆ. ಕಳೆದ ವರ್ಷ ಜೂ.21ರಂದು ನಡೆದ ರಾಷ್ಟ್ರೀಯ ಚಾಂಪಿಯನ್ಶಿಪ್ ವೇಳೆ ಉದ್ದೀಪನ ಮದ್ದು ಸೇವನೆ ಮಾಡಿದ್ದು, ಪರೀಕ್ಷೆಯಲ್ಲಿ ಸಾಬೀತಾಗಿದೆ. ಹಾಗಾಗಿ 18 ತಿಂಗಳ ಕಾಲ ನಿಷೇಧ ಹೇರಲಾಗಿದ್ದು, ಡಿ.20ರವರೆಗೆ ನಿಷೇಧದಲ್ಲಿರಬೇಕಾಗಿದೆ.ಕಳೆದ ಮಂಗಳವಾರವಷ್ಟೇ ಉದ್ದೀಪನ ಮದ್ದು ಸೇವನೆಗೆ ಜಮೈಕಾದ ಡಿಸ್ಕಸ್ ಥ್ರೊ ಎಸೆತಗಾರ ಅಲಿಸನ್ ರಾಂಡಲ್ ಅವರಿಗೆ 18 ತಿಂಗಳ ನಿಷೇಧ ಹೇರಲಾಗಿತ್ತು.