ಐಪಿಎಲ್ನಿಂದ ಬೆಳೆಯುತ್ತೇನೆ: ರಸೂಲ್
ನವದೆಹಲಿ: ಸ್ಟಾರ್ ಆಟಗಾರರು ಭಾಗವಹಿಸುವ ಇಂಡಿಯನ್ ಪ್ರೀಮಿಯರ್ ಲೀಗ್ ನನ್ನ ಕ್ರಿಕೆಟ್ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಐಪಿಎಲ್ನಲ್ಲಿ ಆಡಿದ ಮೊದಲ ಜಮ್ಮು ಮತ್ತು ಕಾಶ್ಮೀರದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದ ಪರ್ವೇಜ್ ರಸೂಲ್ ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಐಪಿಎಲ್ ಪ್ರಮುಖ ಪಂದ್ಯಾವಳಿಯಾಗಿದೆ ಎಂದು ರು. 95 ಲಕ್ಷಕ್ಕೆ ಸನ್ರೈಸರ್ಸ್ ಹೈದರಾಬಾದ್ಗೆ ಹರಾಜಾಗಿರುವ ಜಮ್ಮು ಮತ್ತು ಕಾಶ್ಮೀರದ ಆಲ್ರೌಂಡ್ ಆಟಗಾರ ಅನಿಸಿಕೆ ವ್ಯಕ್ತಪಡಿಸಿದ್ದಾರೆ.