ಗಾಯಕ್ವಾಡ್ಗೆ ಇನ್ಫಿನೀಟ್ ನೆರವು
ಬೆಂಗಳೂರು: ಕಾಮನ್ವೆಲ್ತ್, ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್ ಕ್ರೀಡಾಕೂಟಗಳನ್ನು ಗುರಿಯಾಗಿಸಿಕೊಂಡು ಜರ್ಮನಿ ಅಂತಾರಾಷ್ಟ್ರೀಯ ಈಜು ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಬರ್ಲಿನ್ಗೆ ತೆರಳುತ್ತಿರುವ ಪ್ಯಾರಾಲಿಂಪಿಯನ್ ಈಜುಪಟು ಶರತ್ ಗಾಯಕ್ವಾಡ್ ಅವರಿಗೆ ಇನ್ಫಿನೀಟ್ ಕಂಪ್ಯೂಟರ್ ಸಲ್ಯೂಸನ್ ನೆರವಿನ ಹಸ್ತ ಚಾಚಿದೆ.
ಈಗ ವಿಶ್ವದ ಶ್ರೇಷ್ಠ ಪ್ಯಾರಾಲಿಂಪಿಯನ್ ಗಳೊಂದಿಗೆ ಸ್ಪರ್ಧಿಸಲು ಶರತ್ಗೆ ಅವಕಾಶ ದೊರಕಿದಂತಾಗಿದೆ. ಶರತ್ಗೆ ಸನ್ಮಾನ ಮತ್ತು ಶುಭ ಹಾರೈಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಪ್ರಶಸ್ತಿ ವಿಜೇತ ಮಾಜಿ ಅಥ್ಲೀಟ್ ರೀತ್ ಅಬ್ರಾಹ್ಮಮ್ ಮತ್ತು ಇನ್ಫಿನೀಟ್ ನಿರ್ದೇಶಕ ಉಪಿಂದರ್ ಜುತ್ಷಿ ಅವರು ಭಾಗವಹಿಸಿದ್ದರು.