ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟೆನಿಸ್: ಪ್ರಶಸ್ತಿ ಉಳಿಸಿಕೊಂಡ ಒಎನ್‌ಜಿಸಿ

Srinivasa Murthy VN
Updated On : 11 Apr 2014, 1:25 am

ಬೆಂಗಳೂರು: ಹಾಲಿ ಚಾಂಪಿಯನ್ ಒಎನ್‌ಜಿಸಿ, ಈ ಬಾರಿಯೂ ಪಿಎಸ್‌ಪಿಬಿ ಅಂತರ್ ಘಟಕ ಟೆನಿಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಉಳಿಸಿಕೊಂಡಿದೆ.
ಗುರುವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಒಎನ್‌ಜಿಸಿ ತಂಡ 2-1 ಅಂತರದಲ್ಲಿ ಜಿಎಐಎಲ್ ವಿರುದ್ಧ ಗೆಲವು ದಾಖಲಿಸಿತು.
ಒಎನ್‌ಜಿಸಿ ತಂಡದ ವಿಷ್ಣುವರ್ಧನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 6-7 (0), 6-4, 6-3 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿ, ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಪುರುಷರ ಡಬಲ್ಸ್ ವಿಭಾಗದಲ್ಲಿ ಒಎನ್‌ಜಿಸಿ ಜೋಡಿಯಾದ ವಿಷ್ಣುವರ್ಧನ್ ಹಾಗೂ ರಂಜಿತ್ ಜೋಡಿಯು ಜಿಎಐಎಲ್ ಜೋಡಿ ಸಕೇತ್ ಮೈನೆನಿ ಹಾಗೂ ರಾಮ್ ಕುಮಾರ್ ಜೋಡಿ ವಿರುದ್ಧ 6-7 ( 5 ), 7-6, 6-4 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement