ದುಬೈ ಓಪನ್ ಚೆಸ್: ಗ್ರೋವರ್ ಗೆದ್ದ ಗುಪ್ತಾ
ದುಬೈ: ಗ್ರ್ಯಾಂಡ್ ಮಾಸ್ಟರ್ ಅಭಿಜಿತ್ ಗುಪ್ತಾ 16ನೇ ದುಬೈ ಓಪನ್ ಚೆಸ್ ಪಂದ್ಯಾವಳಿಯಲ್ಲಿ ತಮ್ಮ ಎದುರಾಳಿ ಸಹಜ್ ಗ್ರೊವರ್ ವಿರುದ್ಧ ಗೆಲವು ದಾಖಲಿಸಿದ್ದಾರೆ.
ಗುರುವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಅಭಿಜಿತ್ ಅತ್ಯುತ್ತಮ ಪ್ರದರ್ಶನ ನೀಡಿದರು. ಹಾಗಾಗಿ ಪಂದ್ಯದಲ್ಲಿ ನಿರಾಯಾಸವಾಗಿ ಗೆಲವು ದಾಖಲಿಸಿದರು. ಈ ಮೂಲಕ ಗುಪ್ತಾ ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲವು ದಾಖಲಿಸಿದ್ದು, ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಪಂದ್ಯಾವಳಿಯಲ್ಲಿ ಇನ್ನು 6 ಸುತ್ತುಗಳು ಬಾಕಿ ಉಳಿದಿದ್ದು, ಮುಂದಿನ ಪಂದ್ಯಗಳು ಮಹತ್ವದ್ದಾಗಿವೆ. ಅಭಿಜಿತ್ ಜತೆಗೆ ಫ್ರಾನ್ಸ್ನ ಎಡೌರ್ಡೊ ರೊಮೈನ್, ಪರಗ್ವೈನ ಅಕ್ಸೆಲ್ ಬಚ್ಮನ್, ಕಜಕಸ್ತಾನದ ಅನೌರ್ ಇಸ್ಮಾಗಬೆಟೌವ್, ವೆನೆಜುಲಾದ ಎಡೌರ್ಡೊ ಇಟ್ಟುರಿಜಗ್ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಲಲಿತ್ಬಾಬು, ದೆಬಶಿಶ್ ದಾಸ್, ದೀಪ್ತಾಯನ್ ಘೋಶ್, ತಲಾ 2.5 ಅಂಕ ಗಳಿಸಿದ್ದಾರೆ.