ಕೊಹ್ಲಿ ಹಿಂದಿಕ್ಕಿದ ಧೋನಿ ಬ್ರ್ಯಾಂಡ್
ಮಹೇಂದ್ರ ಧೋನಿ ಅವರ ಜಾಹೀರಾತು ಮಾರುಕಟ್ಟೆ ಬ್ರ್ಯಾಂಡಿಂಗ್ನಲ್ಲಿ ಏರಿಕೆ ಕಂಡಿದ್ದು, ತಂಡದ ಪ್ರಮುಖ ಬ್ಯಾಟ್ಸ್ಮನ್ ವಿರಾಟ್..
ನವದೆಹಲಿ: ಟಿ20 ವಿಶ್ವಕಪ್ ಸೋಲಿನ ನಂತರವೂ ನಾಯಕ ಮಹೇಂದ್ರ ಧೋನಿ ಅವರ ಜಾಹೀರಾತು ಮಾರುಕಟ್ಟೆ ಬ್ರ್ಯಾಂಡಿಂಗ್ನಲ್ಲಿ ಏರಿಕೆ ಕಂಡಿದ್ದು, ತಂಡದ ಪ್ರಮುಖ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೆಟ್ಟಿಂಗ್ ಪ್ರಕರಣದಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಧೋನಿ ಬ್ರ್ಯಾಂಡ್ ಮೌಲ್ಯದಲ್ಲಿ ಶೇ.60ರಷ್ಟು ಏರಿಕೆಯಾಗಿದೆ. ಕಳೆದ ವರ್ಷಾಂತ್ಯಕ್ಕೆ ಧೋನಿ ಪ್ರತಿ ಜಾಹೀರಾತಿನ ಒಪ್ಪಂಧಕ್ಕೆ ವರ್ಷಕ್ಕೆ 8ಕೋಟಿಯಷ್ಟು ಸಂಭಾವನೆ ಪಡೆಯುತ್ತಿದ್ದರು. ನಂತರ ಅಡಿಡಾಸ್ ಜತೆಗೆ 10 ಕೋಟಿ ಒಪ್ಪಂಧ ಮಾಡಿಕೊಂಡ ವಿರಾಟ್ ಕೊಹ್ಲಿ, ಧೋನಿಯನ್ನು ಹಿಂದಿಕ್ಕಿದ್ದರು.ಆದರೆ ಈಗ ಧೋನಿ ಮತ್ತೆ 13 ಕೋಟಿ ಒಪ್ಪಂಧ ಮಾಡಿಕೊಳ್ಳುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.