ಆಯ್ಕೆದಾರರಿಗೆ ವಿದೇಶ ಪ್ರವಾಸವಿಲ್ಲ
ಮುಂಬೈ: ಭಾರತ ತಂಡ ವಿದೇಶಿ ನೆಲದಲ್ಲಿ ಕ್ರಿಕೆಟ್ ಸರಣಿಯನ್ನಾಡುವಾಗ ತಂಡದ ಆಟಗಾರರ ಪ್ರದರ್ಶನವನ್ನು ವಿಕ್ಷಿಸಲು ರಾಷ್ಟ್ರೀಯ ಆಯ್ಕೆಗಾರರನ್ನು ವಿದೇಶಕ್ಕೆ ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಂಡಳಿಯ ಉಪಾಧ್ಯಕ್ಷ ರವಿ ಸಾವಂತ್ ತಿಳಿಸಿದ್ದಾರೆ.
ಇಷ್ಟು ದಿನಗಳ ಕಾಲ ರಾಷ್ಟ್ರೀಯ ತಂಡದ ಆಯ್ಕೆಗಾರರು ವಿದೇಶಿ ಪ್ರವಾಸದ ವೇಳೆ ತಂಡದೊಂದಿಗೆ ತೆರಳುತ್ತಿದ್ದರು. ಆದರೆ ಇನ್ನುಮುಂದೆ ಆಯ್ಕೆಗಾರರು ತಂಡದೊಂದಿಗೆ ತೆರಳುತ್ತಿಲ್ಲ. ಇದು ಬಿಸಿಸಿಐನ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ. ಭಾರತದ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರನ್ನು ಮುಂಬೈ ಕ್ರಿಕೆಟ್ ಸಂಸ್ಥೆಯ ಆಯ್ಕೆ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಸಾವಂತ್ ಉತ್ತರಿಸಿದರು.