ಫೈನಲ್ಗೆ ಬರೋಡಾ, ಗೆದ್ದರೂ ಕೇರಳ ಔಟ್
ಮುಂಬೈ: ಕೇರಳ ತಂಡದ ಆಟಗಾರರು ಸೈಯದ್ ಮುಷ್ತಾಕ್ ಅಲಿ ಅಖಿಲ ಭಾರತ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ 'ಬಿ' ಗುಂಪಿನ ತಮ್ಮ ಕೊನೆಯ ಸೂಪರ್ ಲೀಗ್ ಪಂದ್ಯದಲ್ಲಿ ಬರೋಡಾ ವಿರುದ್ಧ 22 ರನ್ಗಳ ಜಯ ದಾಖಲಿಸಿದೆ. ಆದಾಗ್ಯೂ ಕೂಡ ಕೇರಳಕ್ಕೆ ಫೈನಲ್ ಪ್ರವೇಶಿಸುವ ಭಾಗ್ಯ ಲಭಿಸಲಿಲ್ಲ.
ಮತ್ತೊಂದೆಡೆ ಬರೋಡಾ ತಂಡ ಸೋಲನುಭವಿಸಿ ಐದು ತಂಡಗಳ ಅಂಕ ಪಟ್ಟಿಯಲ್ಲಿ ಕೇರಳ ವಿರುದ್ಧ ತಲಾ 12 ಅಂಕಗಳೊಂದಿಗೆ ಸಮಗೌರವ ಪಡೆದರೂ ಸಹ ರನ್ ಸರಾಸರಿ ಆಧಾರದ ಮೇಲೆ ಪ್ರಶಸ್ತಿ ಸುತ್ತಿಗೆ ಹೆಜ್ಜೆ ಹಾಕಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇರಳ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ಗಳಿಸಿತು. ಉತ್ತರವಾಗಿ ಬರೋಡಾ 130 ರನ್ಗಳಗೆ ಪತನಗೊಂಡಿತು.
ಇದೇ ಗುಂಪಿನಲ್ಲಿ ಇಂದು ನಡೆದ ಔಪಚಾರಿಕವಾಗಿದ್ದ ಮತ್ತೊಂದು ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ದೆಹಲಿ 7 ರನ್ಗಳ ರೋಚಕ ಗೆಲವು ದಾಖಲಿಸಿದೆ.
ದೆಹಲಿ ತಂಡ ಮೊದಲು ಬ್ಯಾಟ್ ಮಾಡಿ ಕ್ಷಿತಿಜ್ ಶರ್ಮಾರ (57) ಅರ್ಧಶತಕದ ನೆರವಿನಿಂದ 4 ವಿಕೆಟ್ಗೆ 144 ರನ್ ಸಂಪಾದಿಸಿತು. ಆದರೆ, ಸಾಧಾರಣ ಗುರಿಯನ್ನು ಬೆಂಬತ್ತುವಲ್ಲಿ ವಿಫಲವಾದ ರಾಜಸ್ಥಾನ ಪಡೆಗೆ 137 ರನ್ಗಳಿಸಲಷ್ಟೇ ಸಾಧ್ಯವಾಯಿತು.
ಉತ್ತಮ ರನ್ ಸರಾಸರಿ ಆಧಾರದ ಮೇಲೆ ಬರೋಡಾ ಆಟಗಾರರು (0.774) ಎದುರಾಳಿ ಕೇರಳವನ್ನು (0.661) ಹಿಂದಿಕ್ಕಿ ಅಗ್ರಸ್ಥಾನದ ಗೌರವದೊಂದಿಗೆ ಫೈನಲ್ ತಲುಪಿತು.
ಸಂಕ್ಷಿಪ್ತ ಸ್ಕೋರ್
ಕೇರಳ 20 ಓವರುಗಳಲ್ಲಿ 6 ವಿಕೆಟ್ಗೆ 152
(ರೇಫಿ ಗೋಮೆಜ್ ಅಜೇಯ 42, ಜಾಫರ್ ಜಮಾಲ್ 37, ರಾಹುಲ್ ಪ್ರೇಮ್ 30, ಕೆ. ಪಾಂಡ್ಯ 31ಕ್ಕೆ3, ಮುನಾಫ್ ಪಟೇಲ್ 26ಕ್ಕೆ2).
ಬರೋಡಾ 20 ಓವರುಗಳಲ್ಲಿ 8 ವಿಕೆಟ್ಗೆ 130
(ಎ. ವಾಘ್ಮೋಡೆ 50, ಕೆ. ಪಾಂಡ್ಯ 22, ದೇವ್ಧರ್ 16, ಕೆ.ಜೆ. ರಾಜೇಶ್ 34ಕ್ಕೆ3, ಆರ್. ಪ್ರೇಮ್ 14ಕ್ಕೆ2).
ದೆಹಲಿ 20 ಓವರುಗಳಲ್ಲಿ 4 ವಿಕೆಟ್ಗೆ 144
(ಕ್ಷಿತಿಜ್ ಶರ್ಮಾ 57, ಯೋಗೇಶ್ ನಗರ 29, ವಿನೋದ್ ಚಾವರಿಯಾ 23ಕ್ಕೆ2, ಗಜೇಂದ್ರ ಸಿಂಗ್ ಪರಿಹಾರ್ 14ಕ್ಕೆ1).
ರಾಜಸ್ಥಾನ 19.4 ಓವರುಗಳಲ್ಲಿ
137ಕ್ಕೆ ಆಲೌಟ್
(ಅರ್ಜಿತ್ ಗುಪ್ತಾ 72, ಅಂಕಿತ್ ಲಂಬಾ 30, ಬಿಶ್ನೋಯ್ 12, ಜಾವೇದ್ ಖಾನ್ 18ಕ್ಕೆ4, ಯೋಗೇಶ್ ನಗರ 13ಕ್ಕೆ3).