ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕೋಲ್ಕತಾಗೆ ಗಂಗೂಲಿ ಕೊಚ್ಚಿಗೆ ಸಚಿನ್ ಒಡೆಯ

ಬಹುನಿರೀಕ್ಷಿತ ಫುಟ್ಬಾಲ್‌ನಲ್ಲಿ ಐಪಿಎಲ್ ಮಾದರಿಯ ಲೀಗ್ ಪಂದ್ಯಾವಳಿಗೆ ಮೊದಲ ಮುನುಢಿಡಿ ಬರೆಯಲಾಗಿದೆ.

Srinivasa Murthy VN
Updated On : 14 Apr 2014, 12:09 pm

ನವದೆಹಲಿ: ಬಹುನಿರೀಕ್ಷಿತ ಫುಟ್ಬಾಲ್‌ನಲ್ಲಿ ಐಪಿಎಲ್ ಮಾದರಿಯ ಲೀಗ್ ಪಂದ್ಯಾವಳಿಗೆ ಮೊದಲ ಮುನುಢಿಡಿ ಬರೆಯಲಾಗಿದೆ. ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ (ಐಎಸ್‌ಎಲ್) ಹೆಸರಿನಡಿ ಪಂದ್ಯಾವಳಿ ನಡೆಯಲಿದೆ.
ಭಾನುವಾರ ನಡೆದ ಎಂಟು ತಂಡಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್ ಕೊಚ್ಚಿ ತಂಡವನ್ನು ಖರೀದಿಸಿದ್ದು, ಸೌರವ್ ಗಂಗೂಲಿ ಕೋಲ್ಕತಾ ತಂಡವನ್ನು ಖರೀದಿಸಿದ್ದಾರೆ.
ಎಂಟು ತಂಡಗಳ ಈ ಪಂದ್ಯಾವಳಿ ಭಾರತೀಯ ಫುಟ್ಬಾಲ್ ಕ್ರೀಡೆಗೆ ಹೊಸ ಆಯಾಮ ನೀಡುವ ನಿರೀಕ್ಷೆ ಇದ್ದು, ಇತರೆ ತಂಡಗಳ ಮಾಲೀಕತ್ವವನ್ನು ಬಾಲಿವುಡ್ ತಾರೆಗಳಾದ ರಣಬೀರ್ ಕಪೂರ್, ಸಲ್ಮಾನ್ ಖಾನ್ ಹಾಗೂ ಜಾನ್ ಅಬ್ರಾಹಂ ಪಡೆದುಕೊಂಡಿದ್ದಾರೆ.
ಈ ಪಂದ್ಯಾವಳಿಯು ಇದೇ ವರ್ಷ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಆಯೋಜಿಸಲಾಗುತ್ತಿದೆ. ಕೊಚ್ಚಿ ಫ್ರಾಂಚೈಸಿ ತಂಡವನ್ನು ಸಚಿನ್ ತೆಂಡೂಲ್ಕರ್ ಅವರು ಪಿವಿಪಿ ವೆಂಚರ್ಸ್ ಜತೆಗೆ ಖರೀದಿಸಿದ್ದಾರೆ. ಸೌರವ್ ಗಂಗೂಲಿ ಸ್ಪ್ಯಾನಿಶ್ ಲೀಗ್‌ನ ಅಟ್ಲಾಟಿಕೊ ಮ್ಯಾಡ್ರಿಡ್ ಮತ್ತು ಉದ್ಯಮಿ ಹರ್ಷವರ್ಧನ್ ನೊಟಿಯಾ ಸಂಜೀವ್ ಗೊಯಂಕ್ ಹಾಗೂ ಉತ್ಸವ್ ಪರೆಖ್ ಅವರು ಕೋಲ್ಕತಾ ತಂಡವನ್ನು ಖರೀದಿಸಿದ್ದಾರೆ.
ಇನ್ನು ಮುಂಬೈ ತಂಡದ ಫ್ರಾಂಚೈಸಿ ಬಾಲಿವುಡ್ ತಾರೆ ರಣಬೀರ್ ಕಪೂರ್ ಹಾಗೂ ಬಿಮಲ್ ಪರೇಖ್ ಪಾಲಾಗಿದ್ದು, ಪುಣೆ ಫ್ರಾಂಚೈಸಿ ಮತ್ತೊಬ್ಬ ಬಾಲಿವುಡ್ ನಟ ಸಲ್ಮಾನ್ ಖಾನ್, ವಾಧವನ್ ಗ್ರೂಪ್‌ನ ಜತೆ ಖರೀದಿಸಿದ್ದಾರೆ.
ಇನ್ನು ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಟ ಜಾನ್ ಅಬ್ರಾಹಂ, ಐ ಲೀಗ್ ತಂಡವಾದ ಶಿಲ್ಲಾಂಗ್ ಲಾಜೊಂಗ್ ಜತೆಗೆ ಗುವಾಹಟಿ ಫ್ರಾಂಚೈಸಿಯನ್ನು ಬಾಚಿಕೊಂಡಿದ್ದಾರೆ.
ಇನ್ನು ಉಳಿದ ಮೂರು ತಂಡಗಳಾದ ದೆಹಲಿಯನ್ನು ಸಮೀರ್ ಮಂಚಂದ್ ನೇತೃತ್ವದ ಡೆನ್ ನೆಟ್‌ವರ್ಕ್ ಸಂಸ್ಥೆ, ಬೆಂಗಳೂರು ಫ್ರಾಂಚೈಸಿಯನ್ನು ಸನ್ ಗ್ರೂಪ್, ಹಾಗೂ ಗೋವಾ ತಂಡವನ್ನು ವಿಡಿಯೊಕಾನ್‌ನ ವೇಣುಗೋಪಾಲ್ ಧೂತ್, ದತ್ತರಾಜ್ ಸಲ್ಗಾಂವ್‌ಕರ್ ಮತ್ತು ಶ್ರೀನಿವಾಸ್ ವಿ ಡೆಂಪೊ ಖರೀದಿಸಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಸಂಸ್ಥೆ ಬೆಂಬಲದೊಂದಿಗೆ ಐಎಮ್‌ಜಿ ರಿಲಯನ್ಸ್ ಹಾಗೂ ಸ್ಟಾರ್ ಇಂಡಿಯಾ ಈ ಲೀಗ್ ಅನ್ನು ಆಯೋಜಿಸುತ್ತಿದೆ. ಈ ಪಂದ್ಯಾವಳಿಯಲ್ಲಿ ಐಕಾನ್ ಆಟಗಾರರಾಗಿ ಫ್ರಾನ್ಸ್‌ನ ಮಾಜಿ ಅಂತಾರಾಷ್ಟ್ರೀಯ ಆಟಗಾರ ರಾಬರ್ಟ್ ಪೈರ್ಸ್, ಆರ್ಸೆನಲ್ ಆಟಗಾರ ಫೆಡ್ರಿಕ್ ಜುಂಗ್‌ಬರ್ಗ್ ಸೇರಿಕೊಳ್ಳಲಿದ್ದಾರೆ. ಬಿಡ್‌ಗೆ ಆಹ್ವಾನ ಕರೆದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 30 ಸಂಸ್ಥೆಗಳು ತಂಡಗಳನ್ನು ಖರೀದಿಸಲು ಮುಂದೆ ಬಂದಿದ್ದವು ಎಂದು ಆಯೋಜಕರು ತಿಳಿಸಿದ್ದಾರೆ.

'ನಾನು ಎಂದಿಗೂ ಕ್ರೀಡಾಪಟುವಾಗಿ ಉಳಿಯಲು ಇಚ್ಛಿಸಿದ್ದು, ದೇಶದಲ್ಲಿ ಕ್ರೀಡಾಕ್ಷೇತ್ರದ ಮೇಲೆ ಸಕಾರಾತ್ಮಕ ಪ್ರಭಾವ ಬೀರಬೇಕಿದೆ. ದೇಶದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮ ಮಟ್ಟಕ್ಕೆ ಬೆಳೆಯಲು ಇಂಡಿಯನ್ ಸೂಪರ್ ಲೀಗ್ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ.
- ಸಚಿನ್ ತೆಂಡೂಲ್ಕರ್, ಕೊಚ್ಚಿ ತಂಡದ ಮಾಲೀಕ

ತಂಡ                     ಫ್ರಾಂಚೈಸಿ
ಬೆಂಗಳೂರು        ದಿ ಸನ್ ಗ್ರೂಪ್
ದೆಹಲಿ        ಸಮೀರ್ ಮಂಚಂದ್ ನೇತೃತ್ವದ ಡೆನ್ ನೆಟ್‌ವರ್ಕ್
ಗೋವಾ        ವೇಣುಗೋಪಾಲ್ ಧೂತ್ (ವಿಡಿಯೊಕಾನ್), ದತ್ತಾರಾಜ್ ಸಲ್ಗಾಂವ್‌ಕರ್ ಮತ್ತು ಶ್ರೀನಿವಾಸ ವಿ. ಡೆಂಪೊ
ಗುವಾಹಟಿ        ಜಾನ್ ಅಬ್ರಾಹಂ ಮತ್ತು ಶಿಲಾಂಗ್ ಲಾಜಾಂಗ್
ಕೊಚ್ಚಿ        ಸಚಿನ್ ತೆಂಡೂಲ್ಕರ್ ಮತ್ತು ಪಿವಿಪಿ ವೆಂಚರ್ಸ್
ಕೋಲ್ಕತಾ        ಸೌರವ್ ಗಂಗೂಲಿ, ಹರ್ಷವರ್ಧನ್ ನೆಯೊಟಿಯಾ, ಅಟ್ಲೆಟಿಕೊ ಮ್ಯಾಡ್ರಿಡ್, ಸಂಜೀವ್ ಗೊಯೆಂಕಾ
ಮುಂಬೆ        ರಣಬೀರ್ ಕಪೂರ್ ಮತ್ತು ಬಿಮಲ್ ಪಾರೇಖ್
ಪುಣೆ        ಸಲ್ಮಾನ್ ಖಾನ್, ವಧವಾನ್ ಗ್ರೂಪ್‌ನ ಕಪಿಲ್ ವಧವಾನ್ ಮತ್ತು ಧೀರಜ್ ವಧವಾನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement