ವಿಶ್ವ ಸ್ನೂಕರ್ ಆದಿತ್ಯಾ ಹೊರಕ್ಕೆ
ಶೆಫೀಲ್ಡ್: ಭಾರತದ ಭರವಸೆಯ ಸ್ನೂಕರ್ ಆಟಗಾರ ಆದಿತ್ಯ ಮೆಹತಾ ಅವರ ಗೆಲವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ವಿಶ್ವ ಸ್ನೂಕರ್ನ ಅರ್ಹತಾ ಸುತ್ತಿನಲ್ಲಿ ಜ್ಯಾಮಿ ಜೊನ್ಸ್ ವಿರುದ್ಧ ಸೋಲನುಭವಿಸಿರುವ ಮೆಹತಾ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಜೋನ್ಸ್ ವಿರುದ್ಧ 5-10 ಅಂತರದ ಹಿನ್ನಡೆ ಅನುಭವಿಸಿದ ಮೆಹತಾ ಪರಾಭವಗೊಂಡಿದ್ದಾರೆ. ಈ ಪಂದ್ಯದಲ್ಲಿ ನಿಯಂತ್ರಣ ಕಳೆದುಕೊಂಡ ಆದಿತ್ಯ ಒಂದೇ ಒಂದು ಬ್ರೆಕ್ ಪಾಯಿಂಟ್ ಪಡೆಯಲು ಸಾಧ್ಯವಾಗಲಿಲ್ಲ.
ಒಂದು ಹಂತದಲ್ಲಿ ಪಂದ್ಯ 3-3 ಅಂತರದ ಸಮಬಲ ಸಾಧಿಸಿದ್ದಾಗ ರೋಚಕತೆ ಸೃಷ್ಟಿಯಾಗಿತ್ತು. ಅಂತಿಮವಾಗಿ ಮೆಹತಾ, 4-108 (108), 62-46, 38-67, 66-27, 25-108(68), 1-40, 55-73, 38-89(50), 27-64, 30-80, 75-24, 92-34, 0-82(65), 47-54, 47-59. ಅಂಕಗಳ ಅಂತರದಲ್ಲಿ ಮಣಿದರು.