ಎಡವಿದ ದೀಪಿಕಾ
ಹಾಸ್ಟಾನ್ (ಅಮೆರಿಕ): ಪ್ರಶಸ್ತಿ ಸುತ್ತಿನಲ್ಲಿ ಎಡವಿದ ದೀಪಿಕಾ ಪಳ್ಳಿಕಲ್ ಅವರು, ಟೆಕ್ಸಾಸ್ ಓಪನ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದಾರೆ. ಫೈನಲ್ ಪಂದ್ಯದಲ್ಲಿ ದೀಪಿಕಾ, ಈಜಿಪ್ಟ್‌ನ ಯುವ ಆಟಗಾರ್ತಿ ನೌರ್ ಎಲ್ ಶೆರ್ಬಿನಿ ವಿರುದ್ಧ ಪರಾಭವ ಹೊಂದಿದರು. ವೃತ್ತಿ ಜೀವನದ ಮೊದಲ ಪ್ರಮುಖ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದ ವಿಶ್ವದ 12ನೇ ನಂಬರ್ ಆಟಗಾರ್ತಿ ದೀಪಿಕಾ, 18 ವರ್ಷದ ನೌರ್ ವಿರುದ್ಧ 7-11, 11-5, 7-11 ಸೆಟ್‌ಗಳಿಂದ ನಿರಾಸೆ ಅನುಭವಿಸಿದರು. ಕಳೆದ ತಿಂಗಳು ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ್ತಿ ನಿಕೋಲ್ ಡೇವಿಡ್ ವಿರುದ್ಧ ಜಯ ಕಂಡುಕೊಂಡಿದ್ದರು.