ಅರವಿಂದ್, ಸೌರಭ್ ಮುಂದಡಿ
ನವದೆಹಲಿ: ಭಾರತದ ಶಟ್ಲರ್‌ಗಳಾದ ಸೌರಭ್ ವರ್ಮಾ ಮತ್ತು ಅರವಿಂದ್ ಭಟ್ ಆಕ್ಲೆಂಡ್‌ನಲ್ಲಿ ನಡೆಯುತ್ತಿರುವ ಸ್ಕೈಸಿಟಿ ನ್ಯೂಜಿಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಶ್ರೇಯಾಂಕಿತ ಸೌರಭ್, ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ 21-16, 21-14ರಿಂದ ಸ್ಥಳೀಯ ಆಟಗಾರ ಜೇಮ್ಸ್ ಎನ್ಸನ್ ವಿರುದ್ಧ ಜಯಗಳಿಸಿದರು. ಭಾರತೀಯ ಆಟಗಾರನಿಗೆ ಕೇವಲ 30 ನಿಮಿಷಗಳಲ್ಲಿ ಅಂತಿಮ ಗೆಲವು ಲಭಿಸಿತು.
ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಮೂಲದ ಅರವಿಂದ್ ಭಟ್, 21-9, 14-21, 21-7ರಿಂದ ಮಲೇಷಿಯಾದ ಝೆನ್ ಟಿಂಗ್ ಲಿಮ್ ಅವರನ್ನು ಸೋಲಿಸಿದರು.