ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚೆಸ್: ದ್ವಿತೀಯ ಸ್ಥಾನದಲ್ಲಿ ಗುಪ್ತಾ

Srinivasa Murthy VN
Updated On : 16 Apr 2014, 1:46 am

ದುಬೈ: ಗ್ರ್ಯಾಂಡ್ ಮಾಸ್ಟರ್ ಹಾಗೂ ಮಾಜಿ ವಿಶ್ವ ಕಿರಿಯ ಚಾಂಪಿಯನ್ ಭಾರತದ ಅಭಿಜಿತ್ ಗುಪ್ತಾ 16ನೇ ದುಬೈ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಏಕಾಂಗಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮಂಗಳವಾರ ನಡೆದ 8ನೇ ಸುತ್ತಿನ ಪಂದ್ಯದಲ್ಲಿ ಅಭಿಜಿತ್ ತಮ್ಮ ಎದುರಾಳಿ ಸ್ವಿಜರ್ಲೆಂಡ್‌ನ ಸೆಬಾಸ್ಟಿಯನ್ ಬೊಂಜರ್ ವಿರುದ್ಧ ಗೆಲವು ದಾಖಲಿಸಿದ್ದಾರೆ. ಪಂದ್ಯದ ಮಧ್ಯಭಾಗದಲ್ಲಿ ಸಿಕ್ಕ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಅಭಿಜಿತ್, ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಹಾಗಾಗಿ ಕಳೆದ ಸುತ್ತಿನವರೆಗೂ ದ್ವಿತಿಯ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದ ಅಭಿಜಿತ್, ಈಗ ಒಟ್ಟು 6.5 ಅಂಕಗಳೊಂದಿಗೆ ಏಕಾಂಗಿಯಾಗಿ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನು ಫ್ರಾನ್ಸ್‌ನ ರೊಮೈನ್ ಎಡೌರ್ಡೊ ಪಂದ್ಯಾವಳಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement