ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ನೈಟ್ ರೈಡ್‌ಗೆ ಮುಂಬೈ ಸಜ್ಜು

ಬಹುಕೋಟಿ ಮೊತ್ತದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಪಂದ್ಯಾವಳಿಯ ಏಳರ ಆವೃತ್ತಿಗೆ ಬುಧವಾರ ಚಾಲನೆ ಸಿಗಲಿದೆ.

Srinivasa Murthy VN
Updated On : 16 Apr 2014, 1:05 am

ಅಬುಧಾಬಿ: ಬಹುಕೋಟಿ ಮೊತ್ತದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಪಂದ್ಯಾವಳಿಯ ಏಳರ ಆವೃತ್ತಿಗೆ ಬುಧವಾರ ಚಾಲನೆ ಸಿಗಲಿದೆ.
ಪ್ರಮುಖವಾಗಿ ಸ್ಪಾಟ್ ಫಿಕ್ಸಿಂಗ್ ಹಗರಣಗಳ ಜೊತೆಗೆ ಸಾಕಷ್ಟು ವಿವಾದಗಳನ್ನು ಅಂಟಿಸಿಕೊಂಡಿರುವ ಐಪಿಎಲ್ ಇತ್ತೀಚಿನ ದಿನಗಳಲ್ಲಿ ತೀವ್ರ ಟೀಕೆಗೆ ಒಳಗಾಗಿದೆ. ಆದರೆ, ಈ ಎಲ್ಲ ಕಳಂಕದಿಂದ ಹೊರಬಂದು ನಿಷ್ಕಳಂಕ ಟೂರ್ನಿಯಾಗಿ ಮೂಡಿ ಬರುವ ದೃಷ್ಟಿಯಂದ 2014ರ ಆವೃತ್ತಿಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ರೋಹಿತ್ ಶರ್ಮಾ ಸಾರಥ್ಯದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು 2012ರ ಪ್ರಶಸ್ತಿ ವಿಜೇತ ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಉದ್ಘಾಟನೆ ಪಂದ್ಯ ನಡೆಯಲಿದೆ. ಶೇಖ್ ಝಾಯೇದ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಗೆಲವಿನ ಮೂಲಕ ಶುಭಾರಂಭ ಮಾಡುವ ವಿಶ್ವಾಸದೊಂದಿಗೆ ಉಭಯ ತಂಡಗಳು ಕಣಕ್ಕಿಳಿಯಲು ಸಿದ್ಧವಾಗಿವೆ. ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್‌ಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ ಕಾರಣ ಟೂರ್ನಿಯ ಮೊದಲ ಹಂತ ಯುಎಇಯಲ್ಲಿ ನಡೆಸುವುದು ಅನಿವಾರ್ಯವಾಗಿದೆ. ಏಪ್ರಿಲ್ 16ರಿಂದ 30ರ ವರೆಗೆ ಇಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 20 ಪಂದ್ಯಗಳನ್ನು ಆಡಿಸಲಾಗುತ್ತದೆ. ಬಳಿಕ, ಮೇ 2ರಿಂದ ಭಾರತದಲ್ಲಿ ಟೂರ್ನಿಯ ಎರಡನೇ ಹಂತ ನಡೆಯಲಿದೆ. ಮತ್ತೊಂದು ಅಚ್ಚರಿ ಎಂದರೆ ಈ ಬಾರಿ ಉದ್ಘಾಟನೆ ಸಮಾರಂಭ ಇರುವುದಿಲ್ಲ. ನೇರವಾಗಿ ಪಂದ್ಯಗಳು ಆರಂಭವಾಗಲಿವೆ. ವಿಶ್ವಮಟ್ಟದಲ್ಲಿ ದೇಶೀಯ ಕ್ರಿಕೆಟ್‌ನ ಇತಿಹಾಸದಲ್ಲಿಯೇ ಅತ್ಯಂತ ಜನಪ್ರೀಯವಾಗಿರುವ ಐಪಿಎಲ್‌ಗೆ ಮ್ಯಾಚ್ ಫಿಕ್ಸಿಂಗ್ ಭೂತ ಅಂಟಿಕೊಂಡಿದ್ದು ದುರದೃಷ್ಟ. ಇದರಿಂದ ಇಡೀ ಪಂದ್ಯಾವಳಿಯ ಮೇಲೇಯೇ ಅವಮಾನ ಪಡುವಂತಾಗಿದೆ.  ಈ ಬಾರಿಯ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್ ಯುವರಾಜ್ ಸಿಂಗ್ ಮೇಲೆ ಅತಿಯಾದ ನಿರೀಕ್ಷೆಯಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತಿ ಹೆಚ್ಚು ಬೆಲೆಗೆ ಅಂದರೆ 14 ಕೋಟಿ ರೂಪಾಯಿ ಮೊತ್ತಕ್ಕೆ ಯುವರಾಜ್‌ರನ್ನು ಖರೀದಿಸಿದೆ.
ಹಾಗೆಯೇ, ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕೆವಿನ್ ಪೀಟರ್‌ಸನ್‌ಗೆ 9 ಕೋಟಿ ರೂ. ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ಗೆ 12 ಕೋಟಿಗೂ ಹೆಚ್ಚು ಮೊತ್ತ ನೀಡಿ ಈ ಇಬ್ಬರೂ ಆಟಗಾರರನ್ನು ಡೆಲ್ಲಿ ಡೇರ್‌ಡೆವಿಲ್ಸ್ ಖರೀದಿಸಿದೆ.  ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜುಗೊಂಡಿರುವ ಯುವರಾಜ್, ಪೀಟರ್‌ಸನ್ ಮತ್ತು ಕಾರ್ತಿಕ್ ಅವರು ಎಷ್ಟರಮಟ್ಟಿಗೆ ತಮ್ಮ ಈ ಬೆಲೆಗೆ ನ್ಯಾಯ ಒದಗಿಸುತ್ತಾರೆ, ಯಾವ ರೀತಿಯಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಮುಖ್ಯವಾಗಿದೆ. ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಗೆಲ್ಲುವ ಅವಕಾಶಗಳು ಹೆಚ್ಚಿದೆ. ಕೆಕೆಆರ್‌ಗಿಂತಲೂ ಹೆಚ್ಚು ಸಮತೋಲನದಿಂದ ಕೂಡಿರುವ ತಂಡ ಇದಾಗಿದೆ. ಬಹುತೇಕ ಈ ಹಿಂದೆ ಆಡಿದ ಆಟಗಾರರನ್ನೇ ಮುಂಬೈ ಉಳಿಸಿಕೊಂಡಿದೆ. ಆದರೆ, ನೈಟ್ ರೈಡರ್ಸ್ ಮಾತ್ರ ಕಳೆದ ಆವೃತ್ತಿಯಲ್ಲಿ ಆಡಿದ ಆಟಗಾರರ ಪೈಕಿ ಗಂಭೀರ್ ಮತ್ತು ಸ್ಪಿನ್ನರ್ ಸುನೀಲ್ ನಾರಾಯಣ್ ಈ ಇಬ್ಬರನ್ನು ಮಾತ್ರ ಉಳಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ (ನಾಯಕ), ಲಸಿತ್ ಮಾಲಿಂಗ, ಕೀರನ್ ಪೊಲಾರ್ಡ್, ಹರ್‌ಭಜನ್ ಸಿಂಗ್, ಅಂಬಟಿ ರಾಯುಡು, ಮೈಕ್ ಹಸ್ಸಿ, ಜಹೀರ್ ಖಾನ್, ಪ್ರಗ್ಯಾನ್ ಓಜಾ, ಕೋರೆ ಆ್ಯಂಡರ್ಸನ್, ಜೋಶ್ ಹಾಜಲ್‌ವುಡ್, ಸಿ.ಎಂ. ಗೌತಮ್, ಆದಿತ್ಯ ತಾರೆ, ಅಪೂರ್ವ ವಾಂಖಡೆ, ಮರ್ಚಂಟ್ ಡಿ ಲಾಂಗ್, ಕೃಷ್ಮಾರ್ ಸ್ಯಾಂಟೋಕಿ, ಬೆನ್ ಡಂಕ್, ಪವನ್ ಸುಯಾಲ್, ಸುಶಾಂತ್ ಮರಾಠೆ, ಜಸ್‌ಪ್ರೀತ್ ಬುಮ್ರಾ, ಶ್ರೇಯಸ್ ಗೋಪಾಲ್, ಜಲಜ ಸಕ್ಸೇನಾ.

ಕೋಲ್ಕತಾ ನೈಟ್ ರೈಡರ್ಸ್
ಗೌತಮ್ ಗಂಭೀರ್ (ನಾಯಕ), ಸುನೀಲ್ ನಾರಾಯಣ್, ಜಾಕ್ ಕಾಲಿಸ್, ರಾಬಿನ್ ಉತ್ತಪ್ಪ, ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್, ಉಮೇಶ್ ಯಾದವ್, ವಿನಯ್ ಕುಮಾರ್, ಮಾರ್ನ್ ಮಾರ್ಕೆಲ್, ಪಿಯೂಶ್ ಚಾವ್ಲಾ, ಮನೀಷ್ ಪಾಂಡೆ, ವೀರ್ ಪ್ರತಾಪ್ ಸಿಂಗ್, ಕ್ರಿಸ್ ಲೀನ್, ಆ್ಯಂಡ್ರೆ ರಸೆಲ್, ಎಸ್.ಎಸ್. ಮಂಡಲ್, ಪ್ಯಾಟ್ ಕುಮಿನ್ಸ್, ದೇಬಬ್ರತಾ ದಾಸ್, ಸೂರ್ಯಕುಮಾರ್ ಯಾದವ್, ಮನ್ವಿಂದರ್ ಬಿಸ್ಲಾ, ರಯಾನ್ ಟೆನ್ ಡಾಶ್ಕೇಟ್, ಕುಲ್ದೀಪ್ ಯಾದವ್.

ಆರ್‌ಸಿಬಿ ತಂಡದ ಪಂದ್ಯಗಳು
ದಿನಾಂಕ    ಎದುರಾಳಿ    ಸ್ಥಳ    ಸಮಯ (ಭಾರತೀಯ ಕಾಲಮಾನ)
ಏ.17    ಡೆಲ್ಲಿ ಡೇರ್‌ಡೆವಿಲ್ಸ್    ಶಾರ್ಜಾ    8.00
ಏ.19    ಮುಂಬೈ ಇಂಡಿಯನ್ಸ್    ದುಬೈ    4.00
ಏ.24    ಕೋಲ್ಕತಾ ನೈಟ್ ರೈಡರ್ಸ್    ಶಾರ್ಜಾ    8.00
ಏ.26    ರಾಜಸ್ಥಾನ ರಾಯಲ್ಸ್    ಅಬುಧಾಬಿ    4.00
ಏ.28    ಕಿಂಗ್ಸ್ ಇಲೆವೆನ್ ಪಂಜಾಬ್    ದುಬೈ    8.00
ಮೇ 4    ಸನ್‌ರೈಸರ್ಸ್ ಹೈದರಾಬಾದ್    ಬೆಂಗಳೂರು    8.00
ಮೇ 6    ಮುಂಬೈ ಇಂಡಿಯನ್ಸ್    ಮುಂಬೈ    8.00
ಮೇ 9    ಕಿಂಗ್ಸ್ ಇಲೆವೆನ್ ಪಂಜಾಬ್    ಬೆಂಗಳೂರು    8.00
ಮೇ 11    ರಾಜಸ್ಥಾನ ರಾಯಲ್ಸ್    ಬೆಂಗಳೂರು    8.00
ಮೇ 13    ಡೆಲ್ಲಿ ಡೇರ್‌ಡೆವಿಲ್ಸ್    ಬೆಂಗಳೂರು    8.00
ಮೇ 18    ಚೆನ್ನೈ ಸೂಪರ್ ಕಿಂಗ್ಸ್    ಚೆನ್ನೈ    4.00
ಮೇ 20    ಸನ್‌ರೈಸರ್ಸ್ ಹೈದರಾಬಾದ್    ಹೈದರಾಬಾದ್    4.00
ಮೇ 22    ಕೋಲ್ಕತಾ ನೈಟ್ ರೈಡರ್ಸ್    ಕೋಲ್ಕತಾ    4.00
ಮೇ 24    ಚೆನ್ನೈ ಸೂಪರ್ ಕಿಂಗ್ಸ್    ಬೆಂಗಳೂರು    4.00
ಮೇ 27    ಕ್ವಾಲಿಫೈಯರ್1    ಚೆನ್ನೈ    8.00
ಮೇ 28    ಎಲಿಮಿನೇಟರ್    ಚೆನ್ನೈ    8.00
ಮೇ 30    ಕ್ವಾಲಿಫೈಯರ್2    ಮುಂಬೈ    8.00
ಜೂ.1    ಫೈನಲ್    ಮುಂಬೈ    8.00

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement