ಬಾಕ್ಸರ್‌ಗಳ ಶುಭಾರಂಭ
ನವದೆಹಲಿ: ಭಾರತದ ಭರವಸೆಯ ಯುವ ಬಾಕ್ಸರ್ ಶ್ಯಾಮ್ ಕಾಕರ ಉತ್ತಮ ಪ್ರದರ್ಶನ ನೀಡಿ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗೆಲವು ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ನಡೆದ 49ಕೆ.ಜಿ ವಿಭಾಗದ ಪಂದ್ಯದಲ್ಲಿ ಭಾರತದ ಆಟಗಾರ ತಮ್ಮ ಎದುರಾಳಿ ಯುಎಇಯ ಅಬ್ದುಲ್ಲಾ ಅಲ್ಮುಲ್ಲಾ ವಿರುದ್ಧ ತಾಂತ್ರಿಕ ನಾಕೌಟ್ ಮೂಲಕ ಪಂದ್ಯದಲ್ಲಿ ಗೆಲವು ದಾಖಲಿಸಿದರು. ಪಂದ್ಯದ ಆರಂಭಿಕ ಎರಡು ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ದ ಕಾಕರ, ಪಂದ್ಯದಲ್ಲಿ ನಿಯಂತ್ರಣ ಸಾಧಿಸಿದ್ದರು. ಆದರೆ ಭಾರತೀಯ ಆಟಗಾರನ ಹೊಡೆತಕ್ಕೆ ನಲುಗಿದ ಅಬ್ದುಲ್ಲಾ ಪಂದ್ಯದಲ್ಲಿ ಮುಂದುವರಿಯಲು ಫಿಟ್ ಆಗಿರಲಿಲ್ಲ. ಹಾಗಾಗಿ ಕಾಕರ ಪಂದ್ಯದಲ್ಲಿ ಗೆಲವು ದಾಖಲಿಸಿದರು.
ಇದ್ದಕ್ಕು ಮೊದಲು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಗೌರವ್ ಸೊಲಂಕಿ (52ಕೆ.ಜಿ)ಹಾಗೂ ನೀಲ್ ಕಮಲ್ ಸಿಂಗ್ (75ಕೆ.ಜಿ) ಸೇರಿದಂತೆ ಒಟ್ಟು ನಾಲ್ವರು ಬಾಕ್ಸರ್‌ಗಳು ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಪಡೆದಿದ್ದಾರೆ. ಈ ಮೂಲಕ ಆಟಗಾರರು ಆ.16ರಿಂದ 28ರವರೆಗೆ ಚೀನಾದ ನಾನ್‌ಜಿಂಗ್‌ನಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಹಾದಿ ಸುಗಮವಾಗಿದೆ.
ಇದೇ ಮೊದಲ ಬಾರಿಗೆ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಮಂಜಿತ್ (69 ಕೆ.ಜಿ) ಹಾಗೂ ಮಂಜು ಬೊಂಬಾರಿಯಾ (75 ಕೆ.ಜಿ) ಬೈ ಪಡೆದ ಇತರೆ ಆಟಗಾರರಾಗಿದ್ದಾರೆ.