ಬೋಪಣ್ಣ-ಖುರೇಷಿ ಮುನ್ನಡೆ
ಮೊಂಟೆ ಕಾರ್ಲೊ: ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜೋಡಿಯು ಮೊಂಟೆ ಕಾರ್ಲೊ ರೊಲೆಕ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪ್ರೀಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತ-ಪಾಕ್ ಜೋಡಿಯು ತಮ್ಮ ಎದುರಾಳಿ ಜೋಡಿಯಾದ ಜೂಲಿಯನ್ ನಾವ್ಲೆ ಹಾಗೂ ವಾಸೆಕ್ ಪೊಸ್ಪಿಸಿಲ್ ವಿರುದ್ಧ 7-6 (2) 6-4 ಸೆಟ್ಗಳ ಗೆಲವು ದಾಖಲಿಸಿದ್ದಾರೆ.
ಒಂದು ಗಂಟೆ 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉಭಯ ಜೋಡಿಗಳು ಪ್ರಬಲ ಕಾದಾಟ ನಡೆಸಿದವು. ಹಾಗಾಗಿ ಪಂದ್ಯ ಹೆಚ್ಚು ಕುತೂಹಲದಿಂದ ಕೂಡಿತ್ತು. ಅಂತಿಮವಾಗಿ ಬೋಪಣ್ಣ ಜೋಡಿಯು ಎದುರಾಳಿ ಜೋಡಿಯ ಪ್ರತಿರೋಧವನ್ನು ಮೆಟ್ಟಿನಿಂತು ಗೆಲವು ದಾಖಲಿಸುವಲ್ಲಿ ಯಶಸ್ವಿಯಾಯಿತು.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಪ್ರಬಲ ಪೈಪೋಟಿ ನಡೆಸಿದ ಹಿನ್ನೆಲೆಯಲ್ಲಿ ಮೊದಲ ಸೆಟ್ನಲ್ಲಿ ಬೋಪಣ್ಣ ಜೋಡಿಯು 7-6(2) ಅಂತರದಲ್ಲಿ ಮೇಲುಗೈ ಸಾಧಿಸಿತು. ನಂತರ ಎರಡನೇ ಸೆಟ್ನಲ್ಲೂ ಅದೇ ಉತ್ತಮ ಪ್ರದರ್ಶನ ಮುಂದುವರಿಸಿದ ಭಾರತ-ಪಾಕ್ ಜೋಡಿ 6-4 ಅಂತರದಲ್ಲಿ ಮೇಲುಗೈ ಸಾಧಿಸಿ ಪಂದ್ಯದಲ್ಲಿ ಗೆಲವು ದಾಖಲಿಸಿತು.