ಸಚಿನ್ ತೆಕ್ಕೆಗೆ ರಾಫೆಲ್ ನಡಾಲ್
ಮುಂಬೈ: ಇಂಡಿಯನ್ ಸೂಪರ್ ಫುಟ್ಬಾಲ್ ಲೀಗ್ನಲ್ಲಿ ಕೊಚ್ಚಿ ಫ್ರಾಂಚೈಸಿಯನ್ನು ಖರೀದಿಸಿರುವ ಸಚಿನ್ ತೆಂಡೂಲ್ಕರ್, ಈಗ ಅಂತಾರಾಷ್ಟ್ರೀಯ ಟೆನಿಸ್ ಪ್ರಿಮಿಯರ್ ಲೀಗ್ನಲ್ಲಿ ಖ್ಯಾತ ಟೆನಿಸ್ ತಾರೆ ರಾಫೆಲ್ ನಡಾಲ್ ಇರುವ ಮುಂಬೈ ಫ್ರಾಂಚೈಸಿಯನ್ನು ಖರೀದಿಸಿರುವ ಬಗ್ಗೆ ವರದಿಗಳು ಬಂದಿವೆ.
ಮಾಧ್ಯಮವೊಂದರಲ್ಲಿ ಬಂದಿರುವ ವರದಿ ಪ್ರಕಾರ, ಸಚಿನ್ ತೆಂಡೂಲ್ಕರ್ ಪಿವಿಪಿ ಗ್ರೂಪ್ ಅವರ ಸಹಬಾಗಿತ್ವದಲ್ಲಿ ಮುಂಬೈ ತಂಡವನ್ನು ಖರೀದಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಜತೆಗೆ ಕೈಜೋಡಿಸಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಲು ನೆರವಾಗುತ್ತಿದೆ. ಹಾಗಾಗಿ ನಾವು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಹೈದರಾಬಾದ್ ಫ್ರಾಂಚೈಸಿ, ಐಎಸ್ಎಲ್ನಲ್ಲಿ ಕೊಚ್ಚಿ ಫ್ರಾಂಚೈಸಿ ಹಾಗೂ ಐಟಿಪಿಎಲ್ನಲ್ಲಿ ಮುಂಬೈ ಫ್ರಾಂಚೈಸಿಯನ್ನು ಖರೀದಿಸಲಾಗಿದೆ ಎಂದು ಪಿವಿಪಿ ಗ್ರೂಪ್ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರಸಾದ್ ಪೊಟ್ಲುರಿ ತಿಳಿಸಿದ್ದಾರೆ.
ಈ ಐಟಿಪಿಎಲ್ ಪಂದ್ಯಾವಳಿಯು ಮುಂದಿನ ನವೆಂಬರ್ನಿಂದ ಆರಂಭವಾಗಲಿದೆ. ಅಲ್ಲದೆ ಪಂದ್ಯಾವಳಿಯಲ್ಲಿ ಮುಂಬೈ, ಬ್ಯಾಂಕಾಕ್,ಸಿಂಗಾಪುರ ಮತ್ತು ದುಬೈ ಫ್ರಾಂಚೈಸಿಗಳು ಭಾಗವಹಿಸುತ್ತಿವೆ.