ಚಿತ್ರಾ, ಉಮಾ ಮೇಲೆ ನಿರೀಕ್ಷೆ
ಲೀಡ್ಸ್: ಭಾರತದ ಭರವಸೆಯ ಮಹಿಳಾ ಸ್ನೂಕರ್ಗಳಾದ ಚಿತ್ರಾ ಮಗಿಮೈರಾಜ್ ಮತ್ತು ಉಮಾದೇವಿ ನಾಗರಾಜ್, ಶುಕ್ರವಾರದಿಂದ ಆರಂಭವಾಗಲಿರುವ ವಿಶ್ವ ಮಹಿಳಾ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಗಳಿವೆ. 2003ರಲ್ಲಿ ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಆಡಿದ ಚಿತ್ರಾ, ನಂತರ ಯಾವುದೇ ವರ್ಷವೂ ತಪ್ಪಿಸದೇ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಇದುವರೆಗೂ ಎರಡು ಬಾರಿ ಚಿನ್ನ, ಮೂರು ಬೆಳ್ಳಿ, ಹಾಗೂ ಮೂರು ಕಂಚಿನ ಪದಕ ಪಡೆದಿದ್ದಾರೆ. ಇನ್ನು ರಾಷ್ಟ್ರೀಯ ಚಾಂಪಿಯನ್ ಉಮಾದೇವಿ 2012ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು. ಬೆಂಗಳೂರಿನ ಚಿತ್ರಾ ಬಿಲಿಯರ್ಡ್ಸ್ ವಿಭಾಗದಿಂದ ಹಿಂದೆ ಸರಿದಿದ್ದು, ಕೇವಲ ಸ್ನೂಕರ್ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ.