ಫೋರ್ಸ್ ಇಂಡಿಯಾ ಸಜ್ಜು
ಶಾಂಗೈ: ಇತ್ತೀಚೆಗಷ್ಟೇ ಬಹ್ರೇನ್ ಜಿಪಿಯಲ್ಲಿ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸಹಾರಾ ಫೋರ್ಸ್ ಇಂಡಿಯಾ, ಭಾನುವಾರ ನಡೆಯಲಿರುವ ಚೀನಾ ಗ್ರ್ಯಾಂಡ್ ಪ್ರಿಕ್ಸ್ನಲ್ಲೂ ತಕ್ಕ ಪ್ರದರ್ಶನ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದೆ. ಅತ್ಯದ್ಭುತ ಪ್ರದರ್ಶನ ನೀಡಿದ್ದ ಫೋರ್ಸ್ ಇಂಡಿಯಾ ಚಾಲಕ ಸೆರ್ಜಿಯೋ ಪೆರೆಜ್ , ಬಹ್ರೇನ್ ಜಿಪಿಯಲ್ಲಿ 3ನೇ ಸ್ಥಾನ ಪಡೆದರೆ, ನಿಕೋ ಹಲ್ಕನ್ಬರ್ಗ್ ಅವರು 5ನೇ ಸ್ಥಾನ ಪಡೆದುಕೊಂಡಿದ್ದರು. ಹೀಗಾಗಿ ಒಟ್ಟು 44 ಅಂಕ ಗಳಿಸಿದ್ದ ತಂಡ ಎರಡನೇ ಸ್ಥಾನ ಗಿಟ್ಟಿಸಿತ್ತು.ಈ ಋತುವಿನಲ್ಲಿ ನಾವು ಶ್ರೇಷ್ಠ ಸ್ಪರ್ಧಾತ್ಮಕ ಕಾರನ್ನು ಹೊಂದಿರುವುದಾಗಿ ಫೋರ್ಸ್ ಇಂಡಿಯಾ ತಂಡದ ಮಾಲೀಕ ವಿಜಯ್ ಮಲ್ಯ ತಿಳಿಸಿದ್ದಾರೆ.