ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಮೊದಲ ಸೋಲು

Srinivasa Murthy VN
Updated On : 17 Apr 2014, 12:37 pm

ನವದೆಹಲಿ: ಭಾರತದ ಆಟಗಾರರು ಯೂರೋಪಿಯನ್ ಹಾಕಿ ಪ್ರವಾಸದಲ್ಲಿ ಮೊದಲ ಸೋಲು ಕಂಡಿದ್ದಾರೆ. ನೆದರ್‌ಲ್ಯಾಂಡ್‌ನ ನಾರ್ಡೆನ್‌ನಲ್ಲಿ ನಡೆದ ತಮ್ಮ ಮೂರನೇ ಪಂದ್ಯದಲ್ಲಿ ಭಾರತದ ಆಟಗಾರರು 1-2 ಗೋಲುಗಳಿಂದ ಬೆಲ್ಜಿಯಂ ಎದುರು ಸೋಲನುಭವಿಸಿದರು.
ಪ್ರವಾಸದ ಮೊದಲ ಪಂದ್ಯದಲ್ಲಿ ಡಚ್‌ನ ರಾಷ್ಟ್ರೀಯ ಕ್ಲಬ್ ತಂಡವಾದ ಲೀಡೆನ್ ಹಾಕಿ ಕ್ಲಬ್ ವಿರುದ್ಧ 7-0 ಗೋಲುಗಳಿಂದ ಜಯಗಳಿಸಿ ಭಾರತ ಶುಭಾರಂಭ ಮಾಡಿತ್ತು.
ಆದರೆ, ಎರಡನೇ ಪಂದ್ಯದಲ್ಲಿ ಎಚ್‌ಜಿಸಿ ಹಾಕಿ ಕ್ಲಬ್ ವಿರುದ್ಧ 3-3 ಗೋಲುಗಳಿಂದ ಡ್ರಾ ಸಾಧಿಸಿದ ಭಾರತದ ಆಟಗಾರರು, ಈಗ ಮೂರನೇ ಪಂದ್ಯದಲ್ಲಿ ಮೊದಲ ಸೋಲು ಉಣ್ಣುವಂತಾಗಿದೆ.
ನೆದರ್‌ಲ್ಯಾಂಡ್‌ನ ಹಾಗ್‌ನಲ್ಲಿ ಮೇ 31ರಿಂದ ಜೂನ್ 15ರ ವರೆಗೆ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್ 2014ರ ಪಂದ್ಯಾವಳಿಗಾಗಿ ಸಿದ್ಧತೆ ಮಾಡಿಕೊಳ್ಳಲು ಭಾರತ ಯೂರೋಪಿಯನ್ ಪ್ರವಾಸ ಕೈಗೊಂಡಿದೆ.
ಕಳೆದ ರಾತ್ರಿ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಭಾರತೀಯರು ಉತ್ತಮ ಪ್ರದರ್ಶನ ನೀಡಿದರಾದರೂ ಗೆಲವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಜೇತ ಬೆಲ್ಜಿಯಂ ಪರ ಟಾಮ್ ಬೂನ್ 17ನೇ ನಿಮಿಷ ಮತ್ತು 59ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ತಮ್ಮ ತಂಡದ ವಿಜಯೋತ್ಸವಕ್ಕೆ ಕಾರಣರಾದರು.
ಭಾರತದ ಪರ ಉಪನಾಯಕ ರೂಪಿಂದರ್ ಪಾಲ್ ಸಿಂಗ್ 58ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement