ವನಿತೆಯರ ಶುಭಾರಂಭ
ನವದೆಹಲಿ: ಸಾಂಘಿಕ ಪ್ರದರ್ಶನ ನೀಡಿದ ಭಾರತದ ವನಿತೆಯರ ಹಾಕಿ ತಂಡ, ಡಬ್ಲಿನ್‌ನಲ್ಲಿ ನಡೆದ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
ಬರುವ ಏಪ್ರಿಲ್ 27ರಿಂದ ಮೇ 4ರವರೆಗೆ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್ ಚಾಲೆಂಜ್ 1ಗೆ ಪೂರ್ವಭಾವಿ ತಯಾರಿ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪಂದ್ಯದ 4ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಐರ್ಲೆಂಡ್‌ನ ಮೆಗನ್ ಫ್ರಜರ್ ಅವರು ಆತಿಥೇಯ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟಿದ್ದರು. ಆದರೆ, ದ್ವಿತೀಯಾರ್ಧದಲ್ಲಿ ಪಂದ್ಯದ 37ನೇ ನಿಮಿಷ 61ನೇ ನಿಮಿಷ ರೀತು ರಾಣಿ ಮತ್ತು 68ನೇ ನಿಮಿಷ ಸುನಿತಾ ಲಕ್ರಾ ಗೋಲು ದಾಖಲಿಸಿ ಭಾರತಕ್ಕೆ 3-1ರಿಂದ ಜಯ ತಂದುಕೊಟ್ಟರು.