ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐಪಿಎಲ್‌ಗೆ ಮೆರಗು ತಂದ ಶಾರುಖ್, ದೀಪಿಕಾ

ಬಾಲಿವುಟ್ ತಾರೆಗಳಾದ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಐಪಿಎಲ್ ಆರಂಭಕ್ಕಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ನೃತ್ಯ..

Srinivasa Murthy VN
Updated On : 18 Apr 2014, 12:04 pm

ಅಬುಧಾಬಿ: ಬಾಲಿವುಟ್ ತಾರೆಗಳಾದ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಐಪಿಎಲ್ ಆರಂಭಕ್ಕಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ಸಮಾರಂಭಕ್ಕೆ ಮೆರಗು ನೀಡಿದರು.
ಮಂಗಳವಾರ ನಡೆದ ಈ ಸಮಾರಂಭದಲ್ಲಿ ನೃತ್ಯ ಪ್ರದರ್ಶನದೊಂದಿಗೆ ಸಮಾರಂಭವನ್ನು ನಡೆಸಿಕೊಟ್ಟ ಶರೂಖ್ ನೆರೆದಿದ್ದ ಆಟಗಾರರು ಹಾಗೂ ಅತಿಥಿಗಳನ್ನು ರಂಜಿಸಿದರು. ಸಮಾರಂಭದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಟ್ರೋಫಿಯನ್ನು ಮತ್ತೆ ಕಣಕ್ಕೆ ಇಟ್ಟರು.
ಈ ವೇಳೆ ಮಾತನಾಡಿದ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸುನಿಲ್ ಗವಾಸ್ಕರ್, ಈ ಪಂದ್ಯಾವಳಿಯ ವೇಳೆ ಕ್ರೀಡೆಯ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಶೇನ್ ವ್ಯಾಟ್ಸ್‌ನ್ ಹಾಡಿದ್ದು, ಶಾರುಖ್ ಜತೆಗೆ ವಿರಾಟ್ ಕೊಹ್ಲಿ ಹೆಜ್ಜೆ ಹಾಕಿದ್ದು, ನೆರೆದಿದ್ದವರನ್ನು ರಂಜಿಸಿತು. ಈ ವೇಳೆ ವಿರಾಟ್ ಕೊಹ್ಲಿಗೆ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರ ಫೋಟೊವನ್ನು ಉಡುಗೊರೆಯಾಗಿ ನೀಡಿದಾಗ, ಕೊಹ್ಲಿ ಮುಗುಳ್ನಗೆ ಬೀರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement