ಪ್ರಾಮಾಣಿಕತೆಯಲ್ಲಿ ರಾಜಿ ಇಲ್ಲ: ಸುನಿಲ್ ಗಾವಸ್ಕರ್
ಐಕ್ಯತೆ ಮತ್ತು ಪ್ರಮಾಣಿಕತೆಯಿಂದ ಕ್ರಿಕೆಟ್ ಆಡುವುದು ಮಹತ್ವದ ವಿಷಯ ಎಂದು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ದುಬೈ: ಐಪಿಎಲ್ ಪಂದ್ಯಾವಳಿಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿರುವ ಸಂದರ್ಭಲ್ಲಿ, ಐಕ್ಯತೆ ಮತ್ತು ಪ್ರಮಾಣಿಕತೆಯಿಂದ ಕ್ರಿಕೆಟ್ ಆಡುವುದು ಮಹತ್ವದ ವಿಷಯ ಎಂದು ಐಪಿಎಲ್ ಪಂದ್ಯಾವಳಿಯನ್ನು ನೋಡಿಕೊಳ್ಳಲು ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ನ ಏಳನೇ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದ ಉದ್ಘಾಟನಾ ಪಂದ್ಯದ ಸಂದರ್ಭದಲ್ಲಿ ಗವಾಸ್ಕರ್ ಮಾತನಾಡಿದರು. 'ಯಾವುದೇ ಕ್ರೀಡೆಯಲ್ಲಿ ಪ್ರಾಮಾಣಿಕತೆಯೊಂದಿಗೆ ರಾಜಿ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಅದೂ, ಕಳೆದ ವರ್ಷ ಭ್ರಷ್ಟಾಚಾರದ ವಾಸನೆ ಕೇಳಿ ಬಂದ ಐಪಿಎಲ್ನಂಹ ಪಂದ್ಯಾವಳಿಯಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಅಲ್ಲದೆ, ಐಪಿಎಲ್ ಕುರಿತು ಜನರಲ್ಲಿ ಇರುವ ಅಭಿಪ್ರಾಯಗಳಲ್ಲಿ ಬದಲಾವಣೆ ತರುವ ಅಗತ್ಯವಿದೆ'ಎಂದಿದ್ದಾರೆ ಗಾವಸ್ಕರ್. ಕೆಲವರ ವೈಯಕ್ತಿಕ ಹಿತಾಸಕ್ತಿಯಿಂದ ಐಪಿಎಲ್ಗೆ ಕಳಂಕ ಬರದಂತೆ ನೋಡಿಕೊಳ್ಳುವ ಮೂಲಕ, ಕ್ರಿಕೆಟ್ನ ಸ್ಫೂರ್ತಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ ಎಂದಿದ್ದಾರೆ.