ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬೋಪಣ್ಣ- ಖುರೇಷಿ ಮುನ್ನಡೆ

Srinivasa Murthy VN
Updated On : 18 Apr 2014, 12:02 pm

ಮಾಂಟ್ ಕಾರ್ಲೊ (ಮೊನಾಕೊ): ಭಾರತದ ಡೇವಿಸ್ ಕಪ್ ಆಟಗಾರ ರೋಹನ್ ಬೋಪಣ್ಣ ಮತ್ತು ಆತನ ಜೊತೆಗಾರ ಪಾಕಿಸ್ತಾನದ ಐಸಾಮುಲ್ ಹಕ್ ಖುರೇಷಿ ಅವರು ಎಟಿಪಿ ಮಾಂಟ್ ಕಾರ್ಲೊ ರೋಲೆಕ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಡಬಲ್ಸ್ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಶ್ರೇಯಾಂಕರಹಿತ ಭಾರತ-ಪಾಕಿಸ್ತಾನ ಜೋಡಿ ಡಬಲ್ಸ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೋಲೆಂಡ್‌ನ ಲೂಕಾಸ್ ಕುಬೋಟ್ ಮತ್ತು ಸ್ವೀಡನ್ನಿನ ರಾಬರ್ಟ್ ಲಿಂಡ್‌ಸ್ಟೆಡ್ ಜೋಡಿಯನ್ನು 6-3, 6-0 ನೇರ ಸೆಟ್‌ಗಳಿಂದ ಪರಾಭವಗೊಳಿಸಿತು.
ರೋಹನ್ ಬೋಪಣ್ಣ ಮತ್ತು ಖುರೇಷಿ ಕೇವಲ 54 ನಿಮಿಗಳ ಆಟದಲ್ಲಿಯೇ ಏಳನೇ ಶ್ರೇಯಾಂಕಿತ ಲೂಕಾಸ್ ಮತ್ತು ರಾಬರ್ಟ್‌ಗೆ ಭಾರಿ ಆಘಾತ ನೀಡುವಲ್ಲಿ ಯಶಸ್ವಿಯಾದರು.
ಪಂದ್ಯದುದ್ದಕ್ಕೂ ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿದ ಭಾರತ-ಪಾಕ್ ಜೋಡಿ ಎದುರಾಳಿಗೆ ಆಟದಲ್ಲಿ ಕೇವಲ ಮೂರು ಗೇಮ್‌ಗಳನ್ನು ಗೆದ್ದುಕೊಳ್ಳಲಷ್ಟೇ ಅವಕಾಶ ನೀಡಿತು. ಮೊದಲ ಗೇಮ್‌ನಲ್ಲಿ ಈ ಗೇಮ್‌ಗಳನ್ನು ಗೆದ್ದುಕೊಳ್ಳುವಲ್ಲಿ ಸಫಲರಾಗಿದ್ದ ಲೂಕಾಸ್ ಮತ್ತು ರಾಬರ್ಟ್ ಎರಡನೇ ಸೆಟ್‌ನಲ್ಲಿ ಮಾತ್ರ ಒಂದೂ ಗೇಮ್ ಗೆದ್ದುಕೊಳ್ಳಲಾಗದೇ ಭಾರಿ ನಿರಾಸೆ ಅನುಭವಿಸಿತು.   ಈ ಪಂದ್ಯದಲ್ಲಿ ಬೋಪಣ್ಣ ಮತ್ತು ಖುರೇಷಿ ಒಟ್ಟು ಐದು ಏಸ್‌ಗಳನ್ನು ಬಾರಿಸಿದರೆ, ಎದುರಾಳಿಯಿಂದ ಕೇವಲ ಒಂದು ಏಸ್ ಸಾಧ್ಯವಾಯಿತು. ಅಲ್ಲದೇ 9 ಗೇಮ್ ಪಾಯಿಂಟ್ ಅವಕಾಶಗಳಲ್ಲಿ ಐದರಲ್ಲಿ ಫಲ ಕಂಡುಕೊಂಡರು.
ಭಾರತ ಮತ್ತು ಪಾಕಿಸ್ತಾನ ಜೋಡಿ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಕ್ರೊವೇಷಿಯಾದ ಇವಾನ್ ಡೋಡಿಂಗ್ ಮತ್ತು ಬ್ರೆಜಿಲ್‌ನ ಮಾರ್ಸೆಲೊ ಮೆಲೊ ಅವರನ್ನು ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement