ಸನ್ರೈಸರ್ಸ್ಗೆ ರಾಯಲ್ಸ್ ಸಡ್ಡು
ಅಬುಧಾಬಿ: ಕಳೆದ ವರ್ಷ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತೀವ್ರ ಕಳಂಕ ಅಂಟಿಸಿಕೊಂಡಿದ್ದ ರಾಜಸ್ಥಾನ ರಾಯಲ್ಸ್, ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಅಲ್ಲದೆ, ಈ ಬಾರಿ ವಿವಾದದ ಸುಳಿಯಿಂದ ಹೊರಬರಲು ಅದು ಯತ್ನಿಸುತ್ತಿದೆ.
ತಂಡದ ಕೆಲ ಆಟಗಾರರು ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಾಗ್ಯೂ, ರಾಜಸ್ಥಾನ ಕಳೆದ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಈ ಬಾರಿ ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ತಂಡದ ನಾಯಕತ್ವ ವಹಿಸಿಕೊಂಡಿದ್ದು, ರಾಹುಲ್ ದ್ರಾವಿಡ್ ಸಲಹೆಯಯೊಂದಿಗೆ ಫಿಕ್ಸಿಂಗ್ ಕಹಿ ಮರೆಯಲು ಎದುರು ನೋಡುತ್ತಿದೆ. ಅಲ್ಲದೆ, ಕೋಚ್ ಪ್ಯಾಡಿ ಅಪ್ಟಾನ್ ಸಹ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡಲು ಸಿದ್ಧರಾಗಿದ್ದಾರೆ.ರಾಜಸ್ಥಾನ ರಾಯಲ್ಸ್ ಸಮತೋಲನದಿಂದ ಕೂಡಿದ ತಂಡ ಎನಿಸಿದೆ. ಸ್ಟೀವನ್ ಸ್ಮಿತ್, ಉನ್ಮುಕ್ತ್ ಚಾಂದ್ ಹಾಗೂ ರಜತ್ ಭಾಟಿಯಾ ಅವರನ್ನು ಹರಾಜಿನಲ್ಲಿ ತಂಡ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ, ವ್ಯಾಟ್ಸನ್ ಅಜಿಂಕ್ಯ ರಹಾನೆ, ಸ್ಟುವರ್ಟ್ ಬಿನ್ನಿ, ಸಂಜು ಸ್ಯಾಮ್ಸನ್, ಜೇಮ್ಸ್ ಫಾಕ್ನರ್ ಹಾಗೂ ಬ್ರಾಡ್ ಹಾಗ್ ಅವರನ್ನು ಉಳಿಸಿಕೊಂಡಿದೆ.ವ್ಯಾಟ್ಸನ್ ಸದಾ ತಂಡದ ಪ್ರಮುಖ ಆಟಗಾರ ಎನಿಸಿದ್ದಾರೆ. ಅಲ್ಲದೆ, ರಾಜಸ್ಥಾನ ತಂಡ ಸದಾ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. 19 ವರ್ಷದ ಸ್ಯಾಮ್ಸನ್ ತಂಡದ ಉದಯೋನ್ಮುಖ ಆಟಗಾರ ಎನಿಸಿದ್ದರೆ. 42 ವರ್ಷದ ಪ್ರವೀಣ್ ತಾಂಬೆ ಕಳೆದ ಆವೃತ್ತಿಯಲ್ಲಿ ಹಲವು ಪಂದ್ಯಗಳನ್ನು ಗೆಲ್ಲಲು ತಂಡಕ್ಕೆ ನೆರವಾಗಿದ್ದರು.ಇನ್ನು ಕಳೆದ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೋಲನುಭವಿಸಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ, ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.ಕಳೆದ ಆವೃತ್ತಿಯಲ್ಲಷ್ಟೇ ಪಂದ್ಯಾವಳಿಗೆ ಪದಾರ್ಪಣೆ ಮಾಡಿದ್ದ ಸನ್ರೈಸರ್ಸ್ 4ನೇ ಸ್ಥಾನ ಪಡೆಯುವ ಮೂಲಕ ಅಚ್ಚರಿ ಮೂಡಿಸಿತ್ತು.ಹರಾಜಿನಲ್ಲಿ ಕೆಲ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡಿರುವ ಸನ್ರೈಸರ್ಸ್ ತಂಡ ಬಲಿಷ್ಠ ಹೋರಾಟ ನೀಡುವ ನಿರೀಕ್ಷೆಯಲ್ಲಿದೆ. ಅಗ್ರ ಕ್ರಮಾಂಕದಲ್ಲಿ ಶಿಖರ್ ಧವನ್, ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಮತ್ತು ಕೆಳಕ್ರಮಾಂಕದಲ್ಲಿ ರಿಕಿ ಭುಯಿ ಮತ್ತು ಮನ್ಪ್ರೀತ್ ಜುನೇಜಾ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಲಿದ್ದಾರೆ.ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ದಿಟ್ಟ ವೇಗಿ ಡೇಲ್ ಸ್ಟೇನ್ ನಾಯಕತ್ವದ ಭುವನೇಶ್ವರ ಕುಮಾರ್ ತಕ್ಕ ಪ್ರದರ್ಶನ ನೀಡಲಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಅಮಿತ್ ಮಿಶ್ರಾ ಮತ್ತು ಕರನ್ ಶರ್ಮಾ ಅವರೊಂದಿಗೆ ಪರ್ವೇಜ್ ರಸೂಲ್ ತಕ್ಕ ಸಾಥ್ ನೀಡಲಿದ್ದಾರೆ.ತಂಡಗಳು:ರಾಜಸ್ಥಾನ ರಾಯಲ್ಸ್: ಶೇನ್ ವ್ಯಾಟ್ಸನ್ (ನಾಯಕ), ಅಜಿಂಕ್ಯ ರಹಾನೆ, ಜೇಮ್ಸ್ ಫಾಕ್ನರ್, ಸ್ಟುವರ್ಟ್ ಬಿನ್ನಿ, ಸಂಜು ಸ್ಯಾಮ್ಸನ್, ಬ್ರಾಡ್ ಹಾಗ್, ಸ್ಟೀವನ್ ಸ್ಮಿತ್, ಅಭಿಷೇಕ್ ನಾಯರ್, ಬೆನ್ ಕಟ್ಟಿಂಗ್, ಕೇನ್ ರಿಚರ್ಡ್ಸ್ನ್, ಟಿಮ್ ಸೌಥೀ, ಉನ್ಮುಕ್ತ್ ಚಾಂದ್, ಅಂಕುಷ್ ಬೈನ್ಸ್, ವಿಕ್ರಮ್ಜೀತ್ ಮಲಿಕ್, ರಾಹುಲ್ ಟೆವಾಟಿಯಾ, ಅಂಕಿತ್ ಶರ್ಮಾ, ಇಕ್ಬಾಲ್ ಅಬ್ದುಲ್ಲಾ, ದವಳ್ ಕುಲಕರ್ಣಿ, ಪ್ರವೀಣ್ ತಾಂಬೆ, ಕರುಣ್ ನಾಯರ್, ದಿಶಾಂತ್ ಯಾಗ್ನಿಕ್.ಸನ್ರೈಸರ್ಸ್ ಹೈದರಾಬಾದ್: ಶಿಖರ್ ಧವನ್ (ನಾಯಕ), ಡೇಲ್ ಸ್ಟೇನ್, ಡೇವಿಡ್ ವಾರ್ನರ್, ಡಾರೆನ್ ಸಾಮಿ, ಅಮಿತ್ ಮಿಶ್ರಾ, ಎರಾನ್ ಫಿಂಚ್, ಇರ್ಫಾನ್ ಪಠಾಣ್, ಇಶಾಂತ್ ಶರ್ಮಾ, ಭುವನೇಶ್ವರ ಕುಮಾರ್, ಬ್ರೆಂಡನ್ ಟೇಲರ್, ಮೋಯ್ಸಿಸ್ ಹೆನ್ರೀಕೇಸ್, ವೇಣುಗೋಪಾಲ್ ರಾವ್, ಜಾಸನ್ ಹೋಲ್ಡರ್, ಎಸ್. ಅನಿರುದ್ಧ್, ಮನ್ಪ್ರೀತ್ ಜುನೇಜಾ, ಕೆ.ಎಲ್ ರಾಹುಲ್, ಅಮಿತ್ ಪಾವುನಿಕರ್, ನಮನ್ ಓಜಾ, ರಿಕಿ ಭುಯಿ, ಆಶಿಶ್ ರೆಡ್ಡಿ, ಚಾಮ್ ಮಿಲಿಂದ್, ಪರ್ವೇಜ್ ರಸೂಲ್, ಪ್ರಶಾಂತ್ ಪರಮೇಶ್ವರನ್, ಕರಣ್ ಶರ್ಮಾ.