ಕ್ರಿಕೆಟ್‌ನಿಂದ ಮತ್ತೆ ಜೊನಾಥನ್ ಟ್ರಾಟ್ ವಿಶ್ರಾಂತಿ
ಲಂಡನ್: ತಕ್ಷಣಕ್ಕೆ ಅನ್ವಯವಾಗುವಂತೆ ಇಂಗ್ಲೆಂಡ್ ತಂಡದ ಆಟಗಾರ ಜೊನಾಥನ್ ಟ್ರಾಟ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ಮಾನಸಿಕ ಖಿನ್ನತೆಯಿಂದಾಗಿ ಟ್ರಾಟ್ ಆಸ್ಟ್ರೇಲಿಯಾ ಪ್ರವಾಸವನ್ನು ಮೊಟಕುಗೊಳಿಸಿ ನಾಲ್ಕು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದರು. ನಂತರ ವಾರ್ವಿಕ್‌ಶೈರ್ ಪರವಾಗಿ ಕೌಂಟಿ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದ್ದರು.
ಇಸಿಬಿ ಹಾಗೂ ವಾರ್ವಿಕ್‌ಶೈರ್ ಜಂಟಿಯಾಗಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಉತ್ತಮ ಉದ್ದೇಶದೊಂದಿಗೆ ಹಾಗೂ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದಕ್ಕಾಗಿ ಈ ತಿಂಗಳು ವಾರ್ವಿಕ್‌ಶೈರ್ ಪರ ಆಡಲು ನಿರ್ಧರಿಸಿದೆ. ಆದರೆ ಮೊದಲ ಪಂದ್ಯದಿಂದಲೂ ನಿರಾಸೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಎದುರಾದ ಒತ್ತಡವನ್ನು ಇಲ್ಲಿಯೂ ಎದುರಿಸುತ್ತಿದ್ದೇನೆ. ಶೇ.100ರಷ್ಟು ಕಾಣಿಕೆ ನೀಡಲು ಕಷ್ಟವಾಗುತ್ತಿದ್ದು, ಇದರಿಂದ ತಂಡದ ಆಟಗಾರರಿಗೆ ತೊಂದರೆಯಾಗುವುದು ಸರಿಯಲ್ಲ. ಹಾಗಾಗಿ ನಾನು ಸದ್ಯಕ್ಕೆ ವಿಶ್ರಾಂತಿ ಪಡೆಯಲು ಇಚ್ಛಿಸುತ್ತೇನೆ ಎಂದು ಟ್ರಾಟ್ ತಿಳಿಸಿದ್ದಾರೆ.