ಬಡ ಮಕ್ಕಳಿಗೆ ಮುಂಬೈ ಆಹ್ವಾನ
ದುಬೈ: ಮುಂಬೈ ಇಂಡಿಯನ್ಸ್ ತಂಡ ತನ್ನ ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಅಂಗವಾದ ಎಜುಕೇಶನ್ ಫಾರ್ ಆಲ್ ವತಿಯಿಂದ ಮುಂಬೈನ ವಿವಿಧ ಎನ್ಜಿಒಗಳಿಂದ ಬಡ ಮಕ್ಕಳನ್ನು ಮುಂಬೈ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯಕ್ಕೆ ಆಹ್ವಾನ ನೀಡಿದೆ.
ಈ ಋುತುವಿನಲ್ಲಿ 9 ಮಕ್ಕಳನ್ನು ಪಂದ್ಯ ವೀಕ್ಷಿಸಲು ಆಹ್ವಾನಿಸುವ ಮೂಲಕ ಮುಂಬೈ ಎಜುಕೇಶನ್ ಫಾರ್ ಆಲ್ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ. ನಂತರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 3ರಂದು ನಡೆಯಲಿರುವ ಪಂದ್ಯವನ್ನು ಈ ಕಾರ್ಯಕ್ರಮಕ್ಕಾಗಿ ಮುಡಿಪಾಗಿಡಲು ಮುಂಬೈ ತಂಡ ನಿರ್ಧರಿಸಿದೆ. ಮಹಾರಾಷ್ಟ್ರದ ವಿವಿಧ ಎನ್ಜಿಒಗಳಿಂದ 18,000ದಿಂದ 20,00 ಬಡಮಕ್ಕಳು ಮೇ.3ರಂದು ಪಂದ್ಯ ವೀಕ್ಷಿಸಲು ಆಗಮಿಸುವ ನಿರೀಕ್ಷೆ ಇದೆ.