ಬಾಕ್ಸಿಂಗ್ ಕ್ವಾರ್ಟರ್ಗೆ ನೀರಜ್
ನವದೆಹಲಿ: ಭಾರತದ ಭರವಸೆಯ ಯುವ ಬಾಕ್ಸರ್ ನೀರಜ್ ಪರಾಸರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ 64 ಕೆ.ಜಿ ವಿಭಾಗದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ನೀರಜ್ ತಮ್ಮ ಎದುರಾಳಿ ಜಾರ್ಜ್ ಅವರನ್ನು 2-1 ಅಂತರದಿಂದ ಮಣಿಸಿದರು. ಇನ್ನು ಬಾಲಕಿಯರ ವಿಭಾಗದಲ್ಲಿ ಭಾರತದ ಎಲ್ಲಾ ಸ್ಪರ್ಧಿಗಳು ಸೋಲನುಭವಿಸುವ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿವೆ.
ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ನೀರಜ್ ಗೆಲವಿನ ನಗೆ ಬೀರಿದರು.
ಇನ್ನು ಭಾರತದ ಇತರೆ ಆಟಗಾರರಾದ ಸತೀಶ್ ಕುಮಾರ್ (56 ಕೆ.ಜಿ) 0-3 ಅಂತರದಲ್ಲಿ ಸೋಲನುಭವಿಸಿದರು. ಬಾಲಕಿಯರ ವಿಭಾಗದಲ್ಲಿ ಜಮುನಾ ಬೊರೊ (60 ಕೆ.ಜಿ) ಉಕ್ರೇನ್ನ ಅನ್ಹೆಲಿನಾ ವಿರುದ್ಧ 0-3 ಅಂತರದಲ್ಲಿ ಮತ್ತು ಮಂಜು ಬೊಂಬಾರಿಯಾ (75 ಕೆ.ಜಿ) ಸಹ ಸೋಲನುಭವಿಸಿದರು. ಶನಿವಾರ ಭಾರತದ ಶ್ಯಾಮ್, ಸಂದೀಪ್ ಕುಮಾರ್ ಹಾಗೂ ಮಂಜಿತ್ ಕಣಕ್ಕಿಳಿಯಲಿದ್ದಾರೆ.