ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವನಿತೆಯರಿಗೆ ಹಾಕಿ ಸರಣಿ

Srinivasa Murthy VN
Updated On : 19 Apr 2014, 12:04 pm

ನವದೆಹಲಿ: ಭಾರತದ ವನಿತೆಯರು ಡಬ್ಲಿನ್‌ನಲ್ಲಿ ನಡೆಯುತ್ತಿರುವ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಮಹಿಳಾ ಹಾಕಿ ಟೆಸ್ಟ್ ಸರಣಿಯಲ್ಲಿ ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ.
ಡಬ್ಲಿನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಭಾರತದ ಮಹಿಳೆಯರು 2-1 ಗೋಲುಗಳಿಂದ ಐರ್ಲೆಂಡ್ ತಂಡವನ್ನು ಮಣಿಸುವುದರೊಂದಿಗೆ ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ 2-0 ಗೆಲವಿನ ಅಂತರದಲ್ಲಿ ಸರಣಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಏಪ್ರಿಲ್ 27ರಿಂದ ಆರಂಭವಾಗಲಿರುವ ಎಫ್‌ಐಎಚ್ ಚಾಂಪಿಯನ್ಸ್ ಚಾಲೆಂಜ್-1 ಹಾಕಿ ಟೂರ್ನಿಗಾಗಿ ತಯಾರಿಯಲ್ಲಿ ತೊಡಗಿರುವ ಭಾರತದ ಆಟಗಾರ್ತಿಯರು ಎರಡನೇ ಪಂದ್ಯದಲ್ಲೂ ಐರ್ಲೆಂಡ್ ವಿರುದ್ಧ ತಮ್ಮ ಪ್ರಭುತ್ವ ಸ್ಥಾಪಿಸಿದರು.
ಮೊದಲ ಟೆಸ್ಟ್‌ನಲ್ಲಿ 3-1 ಗೋಲುಗಳಿಂದ ಗೆಲವು ದಾಖಲಿಸಿದ ಶುಭಾರಂಭ ಮಾಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಸಹ ಶಿಸ್ತಿನ ಆಟ ಸಂಘಟಿಸಿ ನಿರೀಕ್ಷಿತ ಸಫಲತೆ ಪಡೆದುಕೊಂಡಿತು.
ಭಾರತದ ಪರ ಪಂದ್ಯದ 18ನೇ ನಿಮಿಷದಲ್ಲಿ ಸೌಂದರ್ಯ ಯಂಡಾಲಾ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಖಾತೆ ತೆರೆದರು. ಬಳಿಕ 20ನೇ ನಿಮಿಷದಲ್ಲಿ ಸುನಿತಾ ಆಕರ್ಷಕ ಫೀಲ್ಡ್ ಗೋಲು ದಾಖಲಿಸಿದರು. ಮೊದಲ ಅವಧಿಯ ಆಟ ಮುಗಿಯಲು ಕೊನೆಯ ನಿಮಿಷವಿದ್ದಾಗ ಐರ್ಲೆಂಡ್ ತಂಡ ನಿಕೋಲಾ ಇವಾನ್ಸ್ ಮೂಲಕ ಗೋಲಿನ ಖಾತೆ ತೆರೆಯಿತು.
ಉತ್ತರಾರ್ಧದ ಆಟದಲ್ಲಿ ಎರಡೂ ತಂಡಗಳ ಆಟಗಾರ್ತಿಯರು ಸಮಬಲದ ಹೋರಾಟ ನಡೆಸಿದ್ದರಿಂದ ಮತ್ತೊಂದು ಗೋಲು ದಾಖಲಿಸಲು ವಿಫಲರಾದರು. ಹಾಗಾಗಿ ಭಾರತ ತಂಡ ಅಂತಿಮವಾಗಿ ಗೆಲವಿನ ನಗೆ ಬೀರುವಲ್ಲಿ ಸಫಲವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement