ನೆಟ್ಸ್ನಲ್ಲಿ ಬೌಲ್ ಮಾಡಿದ ಸಚಿನ್
ದುಬೈ: ಭಾರತ ಕ್ರಿಕೆಟ್ನ ದಂತಕತೆ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದ ನೆಟ್ಸ್ನಲ್ಲಿ ತಮ್ಮ ಮಗ ಅರ್ಜುನ್ ಜತೆಗೆ ಬೌಲಿಂಗ್ ಮಾಡಿದರು. ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಕ್ರೀಡಾಂಗಣದಲ್ಲಿ ಮುಂಬೈ ತಂಡದ ಅಭ್ಯಾಸದ ವೇಳೆ ಬ್ಯಾಟ್ಸ್ಮನ್ಗಳಿಗೆ ದೀರ್ಘಾವಧಿಯ ಕಾಲ ಬೌಲಿಂಗ್ ಮಾಡಿದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.ಸಚಿನ್ ನಿವೃತ್ತಿಯ ಬಳಿಕ 10ನೇ ಸಂಖ್ಯೆಯ ಜರ್ಸಿಯನ್ನು ಸಚಿನ್ಗೆ ಮೀಸಲಿಡಲು ಮುಂಬೈ ತಂಡ ನಿರ್ಧರಿಸಿರುವುದರಿಂದ ಸಚಿನ್ ಆಟಗಾರರ ಡಗ್ಔಟ್ನಲ್ಲಿ 10ನೇ ಸಂಖ್ಯೆಯ ಜೆರ್ಸಿಯಲ್ಲಿ ಕಾಣಿಸಿಕೊಂಡರು. ನಾವು 10ನೇ ಸಂಖ್ಯೆಯ ಜೆರ್ಸಿಯನ್ನು ಸಚಿನ್ಗೆ ಮೀಸಲಿಡಲು ನಿರ್ಧರಿಸಿದ್ದೇವೆ. ಅವರು ನಮ್ಮ ಐಕಾನ್ ಆಟಗಾರರಾಗಿದ್ದು, ಆ ಜೆರ್ಸಿಯನ್ನು ಧರಿಸಿಕೊಂಡು ನಮ್ಮನ್ನು ಉತ್ತೇಜಿಸುತ್ತಾರೆ ಎಂದು ತಂಡದ ಮಾಧ್ಯಮ ನಿರ್ವಾಹಕ ಲೀಲಾಧರ್ ಸಿಂಗ್ ತಿಳಿಸಿದ್ದಾರೆ.