ನೆದರ್ಲೆಂಡ್ಗೆ ಮಣಿದ ಭಾರತ
ನವದೆಹಲಿ: ವಿಶ್ವಕಪ್ ತಯಾರಿಗಾಗಿ ಯೂರೋಪ್ ಪ್ರವಾಸದಲ್ಲಿರುವ ಭಾರತ ಪುರುಷರ ಹಾಕಿ ತಂಡ, ಸತತ ಮೂರನೇ ಬಾರಿಗೆ ಸೋಲನುಭವಿಸಿದೆ.
ಹಾಗ್ನಲ್ಲಿ ನಡೆದ ಮೂರನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 1-2 ಗೋಲುಗಳ ಅಂತರದಲ್ಲಿ ನೆದರ್ಲೆಂಡ್ಗೆ ಮಣಿಯಿತು. ಮುಂದಿನ ತಿಂಗಳು ಇದೇ ನೆಲದಲ್ಲಿ ಬಹು ನಿರೀಕ್ಷಿತ ಹಾಕಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಉತ್ತಮ ತಯಾರಿ ನಡೆಸಲು ಭಾರತ ತಂಡ ಈ ಪ್ರವಾಸ ಕೈಗೊಂಡಿದೆ.
ಪಂದ್ಯದ ಆರಂಭದಲ್ಲೇ ಗೋಲು ದಾಖಲಿಸಿ ಮುನ್ನಡೆ ಪಡೆದ ಭಾರತ ತಂಡ, ಮೊದಲಾರ್ಧದಲ್ಲಿ 1-0 ಮುನ್ನಡೆ ಪಡೆಯಿತು ಎರಡನೇ ಅವಧಿಯಲ್ಲಿ ನೆದರ್ಲೆಂಡ್ ಆಕ್ರಮಣಕಾರಿ ಆಟ ಪ್ರದರ್ಶಿಸಿ 2 ಗೋಲು ದಾಖಲಿಸುವ ಮೂಲಕ ಗೆಲವು ದಾಖಲಿಸಿತು.