ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಕಾಂಟಿನೆಂಟಲ್ ಚೆಸ್: ಜಂಟಿ ಅಗ್ರಸ್ಥಾನದಲ್ಲಿ ಆಧಿಬನ್

Srinivasa Murthy VN
Updated On : 20 Apr 2014, 11:12 am

ಶಾರ್ಜಾ(ಯುಎಇ): ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಹಾಗೂ ರಾಷ್ಟ್ರೀಯ ಮಾಜಿ ಚಾಂಪಿಯನ್ ಬಿ. ಆಧಿಬನ್ 13ನೇ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಸುತ್ತಿನ ಬಳಿಕ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಭಾರತದ ಭರವಸೆಯ ಆಟಗಾರ ಆಧಿಬನ್ ಭಾನುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಪ್ರತಿಸ್ಪರ್ಧಿ ಭಾರತದವರೇ ಆದ ಜಿ.ಎನ್. ಗೋಪಾಲ್ ಅವರನ್ನು ಪರಾಭವಗೊಳಿಸಿದರು.
ಪಂದ್ಯದಲ್ಲಿ ಕಾಯಿಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ ಅವರು 93ನೇ ನಡೆಯಲ್ಲಿ ಗೆಲವು ದಾಖಲಿಸಿದರು. ಇದರೊಂದಿಗೆ ಸತತ ಮೂರನೇ ಗೆಲವು ದಾಖಲಿಸಿದ ಹಿರಿಮೆಯೊಂದಿಗೆ ಒಟ್ಟು 3 ಅಂಕಗಳ ಸಂಪಾದನೆಯೊಂದಿಗೆ ಅವರು ಜಂಟಿ ಅಗ್ರಸ್ಥಾನದ ಗೌರವ ಉಳಿಸಿಕೊಂಡರು.
ವಿಶ್ವ ಜೂನಿಯರ್ ಚಾಂಪಿಯನ್ ಚೀನಾದ ಯು ಯಂಗೈ ಮತ್ತು ಎಹಸಾನ್ ಘೇಮ್ ಮ್ಯಾಘಮಿ ಸಹ ತಲಾ 3 ಅಂಕಗಳಿಸಿ ಆಧಿಬನ್ ಜೊತೆ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಈ ಚಾಂಪಿಯನ್‌ಶಿಪ್‌ನಲ್ಲಿ ಇನ್ನೂ ಆರು ಸುತ್ತುಗಳು ಆಟ ಉಳಿದಿದೆ.  ಆದರೆ, ಭಾರತದ ಮತ್ತೊಬ್ಬ ಅನುಭವಿ ಆಟಗಾರ ಕೃಷ್ಣನ್ ಶಶಿಕಿರಣ್ ಮೂರನೇ ಸುತ್ತಿನಲ್ಲಿ ಸೋಲನುಭವಿಸಿ ಭಾರಿ ನಿರಾಸೆಗೊಳಗಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement