ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಕದಿನ ಸರಣಿಗೆ 7ರಂದು ಟೀಂ ಇಂಡಿಯಾ ಆಯ್ಕೆ

Srinivasa Murthy VN
Updated On : 2 Aug 2014, 12:05 pm

ಮುಂಬೈ: ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ನಂತರ ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿಗಾಗಿ ಆಗಸ್ಟ್ 7ರಂದು ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಅಂದು ಸಭೆ ಸೇರಲಿದ್ದು, ಏಕದಿನ ಸರಣಿ ಅಲ್ಲದೆ, ಏಕೈಕ ಟಿ-20 ಪಂದ್ಯಕ್ಕೂ ಸಹ ತಂಡವನ್ನು ಆಯ್ಕೆ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.  ಪ್ರಸ್ತುತ ಟೆಸ್ಟ್ ಸರಣಿಯ ಮೂರು ಪಂದ್ಯಗಳು ಕೊನೆಗೊಂಡಿದ್ದು, ಭಾರತ ಮತ್ತು ಇಂಗ್ಲೆಂಡ್ 1-1ರಿಂದ ಸಮಸ್ಥಿತಿಯಲ್ಲಿವೆ. ನಾಟಿಂಗ್‌ಹ್ಯಾಮ್‌ನಲ್ಲಿನ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡರೆ, ಲಾರ್ಡ್ಸ್‌ನಲ್ಲಿನ ಎರಡನೇ ಪಂದ್ಯವನ್ನು 95 ರನ್‌ಗಳಿಂದ ಗೆದ್ದುಕೊಂಡಿದ್ದ ಭಾರತ 1-0ಯಿಂದ ಮೇಲುಗೈ ಸಾಧಿಸಿತ್ತು. ಆದರೆ, ಸೌಥಾಂಪ್ಟನ್‌ನಲ್ಲಿ ಮುಕ್ತಾಯಗೊಂಡ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ 266 ರನ್‌ಗಳಿಂದ ಜಯಭೇರಿ ಬಾರಿಸುವ ಮೂಲಕ ಭಾರತದ ಜೊತೆ ಸಮಗೌರವ ಸಾಧಿಸಿದೆ.
ನಾಲ್ಕನೇ ಟೆಸ್ಟ್ ಮ್ಯಾಚೆಂಸ್ಟರ್‌ನಲ್ಲಿ ಆಗಸ್ಟ್ 7ರಂದೇ ಆರಂಭವಾಗಲಿದ್ದು, ಅದೇ ದಿನ ಏಕದಿನ ತಂಡದ ಆಯ್ಕೆನಡೆಯಲಿದೆ.  ಮುಂದಿನ ವರ್ಷ 2015ರ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಆತಿಥ್ಯದಲ್ಲಿ 50 ಓವರುಗಳ ವಿಶ್ವಕಪ್ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆಯಲ್ಲಿ ಇದನ್ನು ಗಮನದಲ್ಲಿಟ್ಟುಕೊಂಡೇ ಭಾರತ ತಂಡವನ್ನು ಆಯ್ಕೆ ಮಾಡಲು ಆಯ್ಕೆದಾರರು ನಿರ್ಧರಿಸಿದ್ದಾರೆ.
ಈ ಮಧ್ಯೆ ಆಗಸ್ಟ್ 5ರಂದು ಬಿಸಿಸಿಐ ಮಾರುಕಟ್ಟೆ ಸಮಿತಿ ಸಭೆ ನಡೆಯಲಿದ್ದು, ಮುಂಬರುವ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಋುತುವಿಗಳಿಗಾಗಿ ಹೊಸ ಶಿರ್ಷಿಕೆ ಪ್ರಾಯೋಜಕರನ್ನು ಗುರುತಿಸುವ ಮತ್ತು ಇತರೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement