ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗ್ಲೇಡ್ಸ್‌ನಲ್ಲಿ 28ರಿಂದ ಕೆಪಿಎಲ್ ಪಂದ್ಯಾವಳಿ

Srinivasa Murthy VN
Updated On : 2 Aug 2014, 12:06 pm

ಕ.ಪ್ರ. ವಾರ್ತೆ, ಮೈಸೂರು, ಆ.1
ಕೆಎಸ್‌ಸಿಎ ತನ್ನ ಕೆಪಿಎಲ್‌ನ ಮೂರನೆ ಆವೃತ್ತಿಯ 12 ಪಂದ್ಯಗಳನ್ನು ಮೈಸೂರಿನಲ್ಲಿ ಆ.28 ರಿಂದ ಸೆ.3 ರವರೆಗೆ ನಡೆಸಲಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಗೌರವಾರ್ಥ ಈ ಪಂದ್ಯ ನಗರದ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆಯಲಿದೆ.
ಕರ್ನಾಟಕ ಪ್ರೀಮಿಯರ್ ಲೀಗ್ 2010 ಮತ್ತು 2011ರ ಮೊದಲ ಎರಡು ಆವೃತ್ತಿಗಳು ಯಶಸ್ವಿಯಾದ ಬಳಿಕ ಮೂರನೇ ಆವೃತ್ತಿಯ ಪಂದ್ಯಗಳ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿದ್ದು, ಟೀಂ ಮೈಸೂರು ತಂಡವನ್ನು ಎನ್.ರಂಗರಾವ್ ಆ್ಯಂಡ್ ಸನ್ಸ್‌ನ ಅರ್ಜುನ್ ರಂಗ ಮತ್ತು ಪವನ್ ರಂಗ ತಮ್ಮದಾಗಿಸಿಕೊಂಡಿದ್ದಾರೆ.
ಅಂತೆಯೇ ಹೊಸದಾಗಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸುಶೀಲ್ ಜಿಂದಾಲ್ ಮತ್ತು ಬಳ್ಳಾರಿ ಟಸ್ಕರ್ಸ್ ತಂಡವನ್ನು ಅರವಿಂದ ರೆಡ್ಡಿ ಮತ್ತು ಪುರುಷೋತ್ತಮ್ ಖರೀದಿ, ಹೊಸದಾಗಿ ಕೆಪಿಎಲ್‌ಗೆ ಸೇರ್ಪಡೆಯಾಗಿದ್ದಾರೆ.
ಶುಕ್ರವಾರ ನಗರದ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಕೆಎಸ್‌ಸಿಎ ಗೌರವ ಅಧ್ಯಕ್ಷ ಪಿ.ಆರ್.ಅಶೋಕ್ ಆನಂದ್ ಕೆಪಿಎಲ್‌ನ ಲೋಗೋ ಬಿಡುಗಡೆಗೊಳಿಸಿದರು. ಅಲ್ಲದೆ ಫ್ರಾಂಚೈಸಿಗಳ ಪ್ರತಿನಿಧಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು.
ನಂತರ ಮಾತನಾಡಿ, ಮೈಸೂರಿನಲ್ಲಿ ದಿನಕ್ಕೆ ಎರಡು ಪಂದ್ಯದಂತೆ ಒಟ್ಟು 11 ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ. ಅಂತಿಮ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಯುತ್ತದೆ. ಒಡೆಯರ್ ಗೌರವಾರ್ಥ ಮೈಸೂರಿನಲ್ಲಿ ಈ ಪಂದ್ಯ ಆಯೋಜಿಸಲಾಗಿದೆ. ಇಲ್ಲಿನ ವಾತಾವರಣ ಕ್ರೀಡೆಗೆ ಪೂರಕವಾಗಿದೆ. ಮೂವರು ಹೊಸ ಪ್ರಾಂಚೈಸಿಗಳು ಕೆಪಿಎಲ್‌ಗೆ ಸೇರಿರುವುದು ಸ್ವಾಗತಾರ್ಹ ಸಂಗತಿ. ಜೊತೆಗೆ ಕಿಚ್ಚ ಸುದೀಪ್ ಕ್ರೀಡಾ ಮನೋಭಾವದಿಂದ ಕೆಪಿಎಲ್ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರಿಕೆಟಿಗ ದೊಡ್ಡ ಗಣೇಶ್ ಮಾತನಾಡಿ, ಕೆಪಿಎಲ್ ಈಗ ಹೆಚ್ಚು ಜನಮನ್ನಣೆ ಗಳಿಸಿದೆ. ಇದರಿಂದಾಗಿ ಫ್ರಾಂಚೈಸಿಗಳ ಪ್ರೋತ್ಸಾಹವೂ ಹೆಚ್ಚಾಗಿದೆ ಎಂದರು.
ಟೀಂ ಮೈಸೂರಿನ ಅರ್ಜುನ್ ರಂಗ ಮಾತನಾಡಿ, ಕಳೆದ ಬಾರಿಯೂ ಬಿಡ್ ಮಾಡಿದ್ದೆವು. ಆದರೆ ನಮಗೆ ದೊರೆತಿರಲಿಲ್ಲ. ಆ ಬಾರಿ ನಮಗೆ ಅವಕಾಶ ಸಿಕ್ಕಿರುವುದು ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.

ಪಂದ್ಯಾವಳಿ ವಿವರ
ಆ. 28                  ರಾತ್ರಿ 8     ಮಂಗಳೂರು ಯುನೈಟೆಡ್- ರಾಕ್‌ಸ್ಟಾರ್ಸ್
ಆ. 29    ರಾತ್ರಿ 8     ಹುಬ್ಬಳಿ ಟೈಗರ್ಸ್- ಮೈಸೂರು ವಾರಿಯರ್ಸ್
ಆ. 30     ಸಂಜೆ 4     ಬಳ್ಳಾರಿ ಟಸ್ಕರ್ಸ್- ಬಿಜಾಪುರ್ ಬುಲ್ಸ್
ಆ. 30     ರಾತ್ರಿ 8     ಹುಬ್ಬಳಿ ಟೈಗರ್ಸ್- ಬೆಳಗಾವಿ ಪ್ಯಾಂಥರ್ಸ್
ಆ. 31    ಸಂಜೆ 4     ಮಂಗಳೂರು ಯುನೈಟೆಡ್- ಬೀಜಾಪುರ್ ಬುಲ್ಸ್
ಆ. 31     ರಾತ್ರಿ 8     ಬಳ್ಳಾರಿ ಟಸ್ಕರ್ಸ್- ರಾಕ್ ಸ್ಟಾರ್ಸ್
ಸೆ. 1     ರಾತ್ರಿ 8     ಬೆಳಗಾವಿ ಪ್ಯಾಂಥರ್ಸ್- ರಾಕ್ ಸ್ಟಾರ್ಸ್
ಸೆ. 2    ಸಂಜೆ 4     ಬಿಜಾಪುರ ಬುಲ್ಸ್- ಮೈಸೂರು ವಾರಿಯರ್ಸ್
ಸೆ. 2     ರಾತ್ರಿ 8     ಮಂಗಳೂರು ಯುನೈಟೆಡ್- ಬೆಳಗಾವಿ ಪ್ಯಾಂಥರ್ಸ್
ಸೆ. 3     ಸಂಜೆ 4     ಹುಬ್ಬಳಿ ಟೈಗರ್ಸ್- ಬಳ್ಳಾರಿ ಟಸ್ಕರ್ಸ್
ಸೆ. 3     ರಾತ್ರಿ 8     ಮೈಸೂರು ವಾರಿಯರ್ಸ್- ರಾಕ್‌ಸ್ಟಾರ್ಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement