ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭುವಿಗೂ ಗಾಯ; ಮಹೀಗೆ ಚಿಂತೆ

Srinivasa Murthy VN
Updated On : 2 Aug 2014, 12:05 pm

ಸೌಥಾಂಪ್ಟನ್: ಮಧ್ಯಮ ವೇಗದ ಬೌಲರ್ ಭುವನೇಶ್ವರ ಕುಮಾರ ಸಹ ಗಾಯದಿಂದ ಬಳಲುತ್ತಿದ್ದು ಇಂಗ್ಲೆಂಡ್ ವಿರುದ್ಧ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯ ಆರಂಭಕ್ಕೆ ಮುನ್ನವೇ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಮತ್ತೊಂದು ಚಿಂತೆ ಶುರುವಾಗಿದೆ.
ಭುವನೇಶ್ವರ ಕುಮಾರ ಎಡಹಿಮ್ಮಡಿ ಊದಿಕೊಂಡಿದ್ದು, ತಂಡದ ಆಟಗಾರರ ಫುಟ್ಬಾಲ್ ಅಭ್ಯಾಸದಿಂದ ಅವರು ಹೊರಗುಳಿದಿದ್ದರು. ಮತ್ತೊಬ್ಬ ಮಧ್ಯಮ ವೇಗಿ ಇಶಾಂತ್ ಶರ್ಮಾ, ಈಗಾಗಲೇ ಗಾಯದ ಪಟ್ಟಿ ಸೇರಿದ್ದು, ಮೂರನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಅಲ್ಲದೆ, ನಾಲ್ಕನೇ ಟೆಸ್ಟ್‌ನಲ್ಲೂ ಅವರು ಆಡಲು ಅನರ್ಹರಾಗಿದ್ದಾರೆ.
ಹೀಗಿರುವಾಗ ಈಗ ಭುವನೇಶ್ವರ ಕೂಡ ಅದೇ ಪರಿಸ್ಥಿತಿಗೆ ಸಿಲುಕಿದ್ದು ಮಹೀ ಪಡೆಗೆ ಚಿಂತೆಯಾಗಿದೆ. ಸೌಥಸೋಲುಂದು ಸೌಥಾಂಪ್ಟನ್‌ನಲ್ಲಿನ ಮೂರನೇ ಟೆಸ್ಟ್‌ನಲ್ಲಿ ಇಶಾಂತ್ ಅನುಪಸ್ಥಿತಿ ಕಾಡಿತ್ತು. ಸೋಲು ಅರಗಿಸಿಕೊಳ್ಳುವ ಮುನ್ನವೇ ಧೋನಿ ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ.
ಪ್ರಸ್ತುತ ಭುವನೇಶ್ವರ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಸರಣಿಯಲ್ಲಿ 228 ರನ್‌ಗಳನ್ನು ನೀಡಿ 15 ವಿಕೆಟ್ ಉರುಳಿಸಿದ್ದಾರೆ, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ (142.3 ಓವರುಗಳು) ನಂತರ ಅತಿ ಹೆಚ್ಚು ಓವರುಗಳನ್ನು ಎಸೆದಿರುವ ಎರಡನೇ ಬೌಲರ್ ಭುವನೇಶ್ವರ (124.5 ಓವರುಗಳು) ಆಗಿದ್ದಾರೆ.
ನಾಲ್ಕನೇ ಟೆಸ್ಟ್ ಆಗಸ್ಟ್ 7ರಂದು ಮ್ಯಾಂಚೆಸ್ಟೆರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭವಾಗಲಿದ್ದು, ಇನ್ನೂ 5 ದಿನಗಳು ಉಳಿದಿರುವುದರಿಂದ ಅಷ್ಟರೊಳಗೆ ಭುವನೇಶ್ವರ ಪೂರ್ಣ ಚೇತರಿಸಿಕೊಂಡು ಎಂದಿನಂತೆ ದಾಳಿ ನಡೆಸಲು ಸಮರ್ಥವಾಗಲಿ ಎಂದು ಧೋನಿ ಮತ್ತು ಕೋಚ್ ಡಂಕನ್ ಫ್ಲೆಚರ್ ಪ್ರಾರ್ಥಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement