ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಕಾಸ್‌ಗೆ 25 ಲಕ್ಷ ಪ್ರಕಾಶ್‌ಗೆ 15 ಲಕ್ಷ ಬಹುಮಾನ ಘೋಷಣೆ

ಚಿನ್ನದ ಪದಕ ಗೆದ್ದ ಕರ್ನಾಟಕದ ವಿಕಾಸ್..

Srinivasa Murthy VN
Updated On : 2 Aug 2014, 1:17 am

ಬೆಂಗಳೂರು: ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ವಿಕಾಸ್ ಗೌಡಗೆ ರು. 25 ಲಕ್ಷ ಮತ್ತು ಬೆಳ್ಳಿ ಗೆದ್ದ ಪ್ರಕಾಶ್ ನಂಜಪ್ಪಗೆ ರು. 15 ಲಕ್ಷ ನಗದು ಬಹುಮಾನವನ್ನು ಕರ್ನಾಟಕ ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ವಿಕಾಸ್ ಚಿನ್ನದ ಪದಕ ಗೆದ್ದುಕೊಳ್ಳುವ ಮೂಲಕ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮೊದಲ ಪದಕ ದೊರಕಲು ಕಾರಣರಾಗಿದ್ದರು.  ಅಲ್ಲದೆ, ಅಥ್ಲೀಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಅವರು ಮೊದಲ ಪದಕ ತಂದುಕೊಟಿದ್ದಾರೆ. ಇನ್ನು ಪ್ರಕಾಶ್ ನಂಜಪ್ಪ ಅವರು ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.     'ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡಿಗರು ಮಾಡಿದ ಈ ಸಾಧನೆಯನ್ನು ಗೌರವಿಸಿ ವಿಕಾಸ್  ಮತ್ತು ನಂಜಪ್ಪಗೆ ಬಹುಮಾನ ಘೋಷಿಸಲಾಗಿದೆ' ಎಂದು ಯುವಜನ ಸೇವಾ ಮತ್ತು ಮೀನುಗಾರಿಕಾ ಸಚಿವ ಅಭಯ್ ಚಂದ್ರ ಜೈನ್ ಶುಕ್ರವಾರ ತಿಳಿಸಿದರು. 'ವಿಕಾಸ್ ಮತ್ತು ಪ್ರಕಾಶ್ ಸಾಧನೆ ರಾಜ್ಯದಲ್ಲಿನ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲಿದೆ. ಅಲ್ಲದೆ, ಈ ಇಬ್ಬರು ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಲಿದ್ದಾರೆ' ಎಂದರು.

ಸಿಎಂ ಅಭಿನಂದನೆ
ಕಾಮನ್‌ವೆಲ್ತ್ ಕ್ರೀಡಾಕೂಟದ ಡಿಸ್ಕಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ  ಕರ್ನಾಟಕದ ಕ್ರೀಡಾಪಟು ವಿಕಾಸ್ ಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಸಿಸಿದ್ದಾರೆ. ಸ್ವತಃ ವಿಕಾಸ್‌ಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಮುಖ್ಯಮಂತ್ರಿ, ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿರುವ ನಿಮ್ಮನ್ನು ಇಡೀ ನಾಡು ಅಭಿನಂದಿಸುತ್ತದೆ ಎಂದರು. ಅದೇ ರೀತಿ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಕಾಶ್ ನಂಜಪ್ಪ ಅವರಿಗೂ ಕೂಡ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.  ಅಲ್ಲದೆ, ಸಚಿವ ಟಿ.ಬಿ. ಜಯಚಂದ್ರ ಹಾಗೂ ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್ ಕೂಡ ಪದಕದ ಸಾಧನೆ ಮಾಡಿರುವ ಈ ಇಬ್ಬರೂ ಕ್ರೀಡಾಪಟುಗಳಿಗೆ ಅಭಿನಂದನೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement