ಚಿನ್ನದ ನಿರೀಕ್ಷೆಯಲ್ಲಿ ವಿಜೇಂದರ್
ಗ್ಲಾಸ್ಗೋ: ಭಾರತೀಯ ಬಾಕ್ಸಿಂಗ್ ತಂಡವನ್ನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮುನ್ನಡೆಸಿರುವ ಒಲಂಪಿಯನ್ ಬಾಕ್ಸರ್ ವಿಜೇಂದರ್ ಸಿಂಗ್, ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದಾರೆ.
ಶನಿವಾರ ತಡರಾತ್ರಿ ನಡೆಯಲಿರುವ ಪುರುಷರ 75 ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ವಿಜೇಂದರ್ ಚಿನ್ನದ ಪದಕಕ್ಕಾಗಿ, ಐರ್ಲೆಂಡ್ನ ಕೊನ್ನರ್ ಕೊಯ್ಲೆ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಪಂದ್ಯಾವಳಿಯಲ್ಲಿ ಆಕ್ರಮಣಕಾರಿ ದಾಳಿಯ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿರುವ ವಿಜೇಂದರ್, ಚಿನ್ನದ ಪದಕ ಪಡೆಯುವ ಭರವಸೆ ಮೂಡಿಸಿದ್ದಾರೆ. ವಿಜೇಂದರ್ ಜತೆಗೆ ಇನ್ನು ಮೂವರು ಬಾಕ್ಸರ್ಗಳು ಫೈನಲ್ ತಲುಪಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.