ಟೆನಿಸ್: ಗೆದ್ದ ಅನ್ನಿಕಾ ಕಣ್ಣನ್ ಮುನ್ನಡೆ
ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಬೆಂಗಳೂರಿನ ಅನ್ನಿಕಾ ಕಣ್ಣನ್ ನಟೇಶ್ ಬ್ಯಾಟರೀಸ್-ಅಮರಾನ್ 16 ವರ್ಷದೊಳಗಿನ ಟೆನಿಸ್ ಟೂರ್ನಿಯಲ್ಲಿ ಗೆಲವು ದಾಖಲಿಸಿದ್ದಾರೆ.
ಶನಿವಾರ ನಡೆದ ಬಾಲಕಿಯರ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ಅನಿಕಾ, 4ನೇ ಶ್ರೇಯಾಂಕಿತ ಭೂಮಿಕಾ ವಿರುದ್ಧ 8-4ರಿಂದ ಗೆಲವು ಸಾಧಿಸಿದ್ದಾರೆ. ಇತರೆ ಪಂದ್ಯದಲ್ಲಿ ಪ್ರಾರ್ಥನಾ 8-2ರಿಂದ ಮಸೀರಾ ವಿರುದ್ಧ, ನಿಕಿತಾ 8-6ರಿಂದ ಉಪಮನ್ಯು ವಿರುದ್ಧ ಜಯ ಪಡೆದರು. ಬಾಲಕರಲ್ಲಿ ಸಾಯಿ ಪ್ರಣವ್ 8-2ರಿಂದ ಸುಶೃತ್ ವಿರುದ್ಧ, ಅಚಿಂತ್ ಭಗತ್ 8-4ರಿಂದ ಸೂರ್ಯ ಎಲ್ಲಂಗೋವನಾ ವಿರುದ್ಧ ಹಾಗೂ ಸಿದ್ಧಾರ್ಥ್ ಗೌಡ 8-4 ಅಂತರದಲ್ಲಿ ಅನಿರುದ್ಧ್ ಮೂರ್ತಿ ವಿರುದ್ಧ ಗೆಲವು ದಾಖಲಿಸಿದರು.