ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೈನಲ್‌ಗೆ ಲಗ್ಗೆ ಹಾಕಿದ ಭಾರತ

ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ನಂತರ ಹೋರಾಟಕಾರಿ ಪ್ರದರ್ಶನ ನೀಡಿ..

Srinivasa Murthy VN
Updated On : 3 Aug 2014, 1:49 am

ಗ್ಲಾಸ್ಗೋ: ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ನಂತರ ಹೋರಾಟಕಾರಿ ಪ್ರದರ್ಶನ ನೀಡಿದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲವು ದಾಖಲಿಸಿ ಫೈನಲ್ ಸುತ್ತಿಗೆ ಲಗ್ಗೆಹಾಕಿದೆ.
ಶನಿವಾರ ನಡೆದ ಪುರುಷರ ಉಪಾಂತ್ಯದ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿತು. ಆರಂಭದಲ್ಲಿ 0-2 ಅಂತರದ ಹಿನ್ನಡೆ ಅನುಭವಿಸಿದ್ದ ಭಾರತ ನಂತರ ಚುರುಕಿನ ಪ್ರದರ್ಶನ ನೀಡಿ ಗೆಲವು ದಾಖಲಿಸಿತು.
ಪಂದ್ಯದ 2ನೇ ನಿಮಿಷದಲ್ಲಿ ಕಿವೀಸ್ ಪರ ಸಿಮೊನ್ ಚಿಲ್ಡ್ ಗೋಲು ದಾಖಲಿಸಿದರು. ನಂತರ 18ನೇ ನಿಮಿಷದಲ್ಲಿ ನಿಕ್ ಹೈಗ್ ಗೋಲು ದಾಖಲಿಸಿ ತಂಡದ ಅಂತರವನ್ನು ಹೆಚ್ಚಿಸಿದರು.
ನಂತರ ಎಚ್ಚೆತ್ತ ಭಾರತ 28ನೇ ನಿಮಿಷದಲ್ಲಿ ರೂಪಿಂದರ್ ಸಿಂಗ್, ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಇನ್ನು ಎರಡನೇ ಅವಧಿಯಲ್ಲಿ ಭಾರತದ ಪರ ರಮಣ್‌ದೀಪ್ ಸಿಂಗ್ 42ನೇ ನಿಮಿಷದಲ್ಲಿ ಹಾಗೂ ಎಸ್.ವಿ ಸುನಿಲ್ 47ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡ ಪಂದ್ಯದಲ್ಲಿ ಮುನ್ನಡೆ ಸಾಧಿಸಲು ನೆರವಾದರು. ನಂತರ ಎದುರಾಳಿಗೆ ಅವಕಾಶ ನೀಡದೇ ಭಾರತ ಗೆಲವು ದಾಖಲಿಸಿತು. ಭಾರತ ಫೈನಲ್ ಸುತ್ತಿನಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement