ಸಕಿನಾ ಖಾತುನ್ ಕೊರಳಿಗೆ ಕಂಚು
ಗ್ಲಾಸ್ಗೋ: ಭಾರತದ ಪವರ್ಲಿಫ್ಟರ್ ಸಕಿನಾ ಖಾತುನ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 61ಕೆಜಿ ಪವರ್ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಕ್ರೀಡಾಕೂಟದ 10ನೇ ದಿನವಾದ ಶನಿವಾರ ಭಾರತಕ್ಕೆ ಇದು ಮೊದಲ ಪದಕವಾಗಿತ್ತು.ಒಟ್ಟಾರೆ 88.2 ಕೆಜಿ ಭಾರ ಎತ್ತಿದ ಸಕಿನಾ ಮೂರನೇ ಸ್ಥಾನ ಪಡೆದುಕೊಂಡರು.136ಕೆಜಿ ಭಾರ ಎತ್ತಿದ ನೈಜೀರಿಯಾದ ಎಸ್ದರ್ ಓಯೆಮಾ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇನ್ನು 100.2ಕೆಜಿ ಭಾರ ಎತ್ತಿದ ಇಂಗ್ಲೆಂಡ್ನ ನತಾಲೀ ಬ್ಲಾಕೆ ಅವರು ಬೆಳ್ಳಿ ರಜತ ಪದಕ ಗೆದ್ದುಕೊಂಡರು.