ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ಕ್ವಾಶ್‌ನಲ್ಲಿ ಸ್ವರ್ಣ ಸ್ಮಾಶ್

Srinivasa Murthy VN
Updated On : 3 Aug 2014, 1:05 am

ಗ್ಲಾಸ್ಗೋ: ಭಾರತದ ಸ್ಕ್ವಾಷ್ ತಾರೆಗಳಾದ ದೀಪಿಕಾ ಪಳ್ಳಿಕಲ್ ಹಾಗೂ ಜೋಷ್ನಾ ಚಿನ್ನಪ್ಪ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಕ್ರೀಡಾಕೂಟದ 10ನೇ ದಿನವಾದ ಶನಿವಾರ ನಡೆದ ವನಿತೆಯರ ಡಬಲ್ಸ್ ವಿಭಾಗದಲ್ಲಿ ಜೋಷ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಳ್ಳಿಕಲ್, ತಮ್ಮ ಎದುರಾಳಿ ಇಂಗ್ಲೆಂಡ್‌ನ ಜೆನ್ನಿ ಡನ್‌ಕಾಲ್ಫ್ ಹಾಗೂ ಲೌರಾ ಮಸ್ಸಾರೊ ವಿರುದ್ಧ 11-6, 11-8 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಆರಂಭದಿಂದಲೂ ಆಂಗ್ಲ ಜೋಡಿ ವಿರುದ್ಧ ಪ್ರಾಬಲ್ಯ ಮೇರೆದ ಭಾರತೀಯ ಜೋಡಿ, ಯಾವುದೇ ಹಂತದಲ್ಲೂ ನಿಯಂತ್ರಣ ಕಳೆದುಕೊಳ್ಳಲಿಲ್ಲ. ಆರಂಭದಿಂದಲೂ ಸ್ಥಿರ ಪ್ರದರ್ಶನ ತೋರಿದ ಜೋಷ್ನಾ ಹಾಗೂ ದೀಪಿಕಾ ನೇರ ಸೆಟ್‌ಗಳ ಅಂತರದಲ್ಲಿ ಸುಲಭ ಗೆಲವು ದಾಖಲಿಸಿದರು.
ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬಾರಿಗೆ ಸ್ಕ್ವಾಷ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement