ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗುರುಸಾಯಿದತ್‌ಗೆ ಕಂಚು

Srinivasa Murthy VN
Updated On : 4 Aug 2014, 12:40 pm

ಭರವಸೆಯ ಶಟ್ಲರ್ ಆರ್.ಎಂ.ವಿ. ಗುರುಸಾಯಿದತ್ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಭಾರತೀಯ ಆಟಗಾರ ಗುರುಸಾಯಿದತ್, ಕಂಚಿನ ಪದಕಕ್ಕಾಗಿನ ಪೈಪೋಟಿಯಲ್ಲಿ ಇಂಗ್ಲೆಂಡ್‌ನ ರಾಜೀವ್ ಓಸೆಫ್ ಅವರನ್ನು 21-15, 14-21, 21-19 ಅಂಕಗಳಿಂದ ಮಣಿಸಿ ಈ ಸಾಧನೆ ಮಾಡಿದರು. ಐದನೇ ಶ್ರೇಯಾಂಕಿತ ಆಟಗಾರರಾಗಿದ್ದ ಗುರುಸಾಯಿದತ್, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸುಮಾರು ಒಂದು ಗಂಟೆ ಆಟದಲ್ಲಿಯೇ ಮೂರನೇ ಶ್ರೇಯಾಂಕಿತ ಇಂಗ್ಲೆಂಡ್ ಆಟಗಾರನ ಸವಾಲು ಹತ್ತಿಕ್ಕಿ ಪದಕಕ್ಕೆ ಅರ್ಹರಾದರು.

ರಹೇಲುಗೆ ರಜತ
ಅಂತಿಮ ಸುತ್ತಿನಲ್ಲಿ ವೈಫಲ್ಯ ಕಂಡ ಭಾರತದ ಪವರ್‌ಲಿಫ್ಟರ್ ರಾಜಿಂದರ್ ರಹೇಲು ಅವರು ಬೆಳ್ಳಿ ಪದಕ ಗೆದ್ದುಕೊಂಡರು.180.5ಕೆಜಿ ಭಾರ ಎತ್ತಿದ ರಹೇಲು ಬೆಳ್ಳಿ ತಮ್ಮದಾಗಿಸಿಕೊಂಡರೆ, 197ಕೆಜಿ ಭಾರ ಎತ್ತಿದ ನೈಜೀರಿಯಾದ ಅಬ್ದುಲಾಜೀಜ್ ಇಬ್ರಾಹಿಮ್ ಬಂಗಾರ ತಮ್ಮದಾಗಿಸಿಕೊಂಡರು. 178ಕೆಜಿ ಭಾರ ಎತ್ತಿದ ಮಲೇಷ್ಯಾದ ಜಾಂಗ್ ಯೀ ಖೀ ಅವರು ಕಂಚಿಗೆ ಕೊರಳೊಡ್ಡಿದರು. 'ನಾನು ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಕ್ಕೆ ಹೆಮ್ಮೆಪಡುತ್ತೇನೆ. ಈ ಸುದ್ದಿಯನ್ನು ನನ್ನ ತಾಯಿಯೊಂದಿಗೆ ಶೀಘ್ರದಲ್ಲೇ ಹಂಚಿಕೊಳ್ಳುವ ಕಾತರದಲ್ಲಿದ್ದೇನೆ. ಈ ಸುದ್ದಿಯನ್ನು ಕೇಳಿದರೆ, ಅವರು ತುಂಬು ಸಂತಸಪಡಲಿದ್ದಾರೆ' ಎಂದು ಪದಕ ಗೆದ್ದ ನಂತರ ಮಾತನಾಡಿದ ರಹೇಲು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement