ಬಿಜಾಪುರ ತಂಡಕ್ಕೆ ಸಮಗ್ರ ಬಹುಮಾನ
ಮೈಸೂರು: ನಗರದಲ್ಲಿ ನಡೆದ 10ನೇ ರಾಜ್ಯ ಮಟ್ಟದ ಮೌಂಟೇನ್ ಬೈಕ್ ಚಾಂಪಿನಯ್ಶಿಪ್ನಲ್ಲಿ ಬಿಜಾಪುರ ಸ್ಪೋರ್ಟ್ಸ್ ಹಾಸ್ಟೆಲ್ ತಂಡವು ಸಮಗ್ರ ಬಹುಮಾನ ಪಡೆಯಿತು.
86 ಅಂಕ ಪಡೆದ ಬಿಜಾಪುರ ಸ್ಪೋರ್ಟ್ಸ್ ಹಾಸ್ಟೆಲ್ ಸಮಗ್ರ ಬಹುಮಾನವನ್ನು ಬಾಚಿಕೊಂಡಿತು. ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಬಿಜಾಪುರ ಸ್ಪೋರ್ಟ್ಸ್ ಹಾಸ್ಟೆಲ್ ತಂಡವು 47 ಅಂಕ ಮತ್ತು ಮಹಿಳೆರ ವಿಭಾಗದಲ್ಲಿ 39 ಅಂಕಗಳೊಂದಿಗೆ ಜಯಗಳಿಸಿತು. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಕ್ರಮವಾಗಿ 23 ಮತ್ತು 30 ಅಂಕಪಡೆದ ಬಾಗಲಕೋಟೆ ಜಿಲ್ಲಾ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.