ಟೆನಿಸ್: ಫೈನಲ್ಗೆ ರಾಹುಲ್
ಬೆಂಗಳೂರು: ಕರ್ನಾಟಕದ ರಾಹುಲ್ ಶಂಕರ್ ಜೆ.ಪಿ. ನಗರದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ನಟೇಶ್ ಬ್ಯಾಟರೀಸ್-ಅಮರಾನ್ ಚಾಂಪಿಯನ್ಶಿಪ್ ಸಿರೀಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಟಾಪ್ಸ್ಪಿನ್ ಟೆನಿಸ್ ಅಕಾಡೆಮಿ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸೋಮವಾರ ನಡೆದ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ರಾಹುಲ್ ಶಂಕರ್, 6-3, 7-5 ನೇರ ಸೆಟ್ಗಳಿಂದ ರಾಹುಲ್ ಶ್ರೀರಾಮ್ ಅವರನ್ನು ಸೋಲಿಸಿದರು. ಫೈನಲ್ನಲ್ಲಿ ರಾಹುಲ್, ಸ್ಥಳೀಯ ಆಟಗಾರ ಹರಿ ಸಿಂಗ್ರನ್ನು ಎದುರಿಸಲಿದ್ದಾರೆ. ಹರಿ ಸಿಂಗ್ 2-6, 6-0, 6-4ರಿಂದ ಕೆ. ತರುಣ್ರನ್ನು ಮಣಿಸಿ ಫೈನಲ್ ತಲುಪಿದರು. ಬಾಲಕಿಯರ ವಿಭಾಗದಲ್ಲಿ ಅನ್ನಿಕಾ ಕಣ್ಣನ್ 6-3, 6-4ರಿಂದ ಅಂಕಿತಾ ನಂದಕುಮಾರ್ ವಿರುದ್ಧ ಹಾಗೂ ಪ್ರತಿಭಾ 6-4, 6-4ರಿಂದ ಪ್ರಾರ್ಥನಾ ವಿರುದ್ಧ ಗೆಲವು ದಾಖಲಿಸಿ ಫೈನಲ್ ತಲುಪಿದ್ದಾರೆ.