ಮೆಹ್ತಾ, ಮಲಿಕ್ ಬಚಾವ್
ರೆಫರಿ ಮಲಿಕ್ ಅಮಾನತು
ನವದೆಹಲಿ: ಅಸಭ್ಯವಾಗಿ ವರ್ತಿಸಿ ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರ ಅತಿಥಿಯಾಗಿದ್ದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮತ್ತು ಕುಸ್ತಿ ರೆಫರಿ ವೀರೇಂದ್ರ ಮಲಿಕ್ ವಿರುದ್ಧದ ಪ್ರಕರಣಗಳನ್ನ್ನು ಸಾಕ್ಷ್ಯಾಧಾರದ ಕೊರತೆ ಹಿನ್ನ್ನೆಲೆಯಲ್ಲಿ ಕೈಬಿಡಲಾಗಿದೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಮೆಹ್ತಾ ಅವರನ್ನ್ನು ಹಾಗೂ ಲೈಂಗಿಕ ಕಿರುಕಳ ನೀಡಿದ ಆರೋಪದಡಿ ಮಲಿಕ್ರನ್ನ್ನು ಕಳೆದ ಶನಿವಾರ ಗ್ಲಾಸ್ಗೋದಲ್ಲಿ ಪೊಲೀಸರು ಬಂಧಿಸಿದ್ದರು. ಸೋಮವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಮೆಹ್ತಾ ಮತ್ತು ಮಲಿಕ್ ವಿರುದ್ಧದ ಆಪಾದನೆಗಳಿಗೆ ಸಂಬಂಧಿಸಿದಂತೆ, ಸೂಕ್ತ ಸಾಕ್ಷ್ಯಗಳಿಲ್ಲ. ಹಾಗಾಗಿ ಪ್ರಕರಣ ಇತ್ಯರ್ಥಗೊಳಿಸಲಾಗಿದ್ದು, ಇಂದು ಷರೀಪ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರಲಿಲ್ಲ ಎಂದು ಹೇಳಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿದ ನಂತರ ಈ ಇಬ್ಬರು ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಆರೋಪ ಪಟ್ಟಿ ದಾಖಲಿಸದೇ ಬಿಡುಗಡೆ ಮಾಡಲಾಗಿದೆ. ವಿಚಾರಣೆಯ ವೇಳೆ ಸ್ಕಾಟ್ಲೆಂಡ್ ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರಗಳು ದೊರೆಯ ಕಾರಣ ಕೋರ್ಟ್ಗೆ ಹಾಜರುಪಡಿಸುವ ಅಗತ್ಯಕಂಡುಬರಲಿಲ್ಲ ಎಂದು ರಾಯಭಾರಿ ಕಚೇರಿ ತಿಳಿಸಿದೆ.
ಮಲಿಕ್ ಅಮಾನತು: ಏತನ್ಮಧ್ಯೆ, ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ಲಾಸ್ಗೋ ಪೊಲೀಸರಿಂದ ಬಂಧಿತರಾಗಿದ್ದ ಕುಸ್ತಿ ರೆಫರಿ ವೀರೇಂದರ್ ಮಲಿಕ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟ ಅಮಾನತುಗೊಳಿಸಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿದೆ.
ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್, ಸೋಮವಾರ ಈ ನಿರ್ಧಾರ ಕೈಗೊಂಡಿದ್ದಾರೆ. ಕಳಂಕಿತ ಅಧಿಕಾರಿ ಮಲಿಕ್ರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಸ್ಕಾಟ್ಲೆಂಡ್ ಪೊಲೀಸರಿಂದ ಪೂರ್ಣ ವರದಿ ಕೈಸೇರಿದ ನಂತರವಷ್ಟೇ ಅವರ ವಿರುದ್ಧ ಕಾಯಂ ಆಗಿ ನಿಷೇಧದ ಶಿಕ್ಷೆ ವಿಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಒಕ್ಕೂಟ ಬಯಸಿದೆ. ಮಲಿಕ್ ಬಂಧನದ ಸುದ್ದಿ ನಿನ್ನೆಯಷ್ಟೇ ತಿಳಿದುಬಂದಿದ್ದು, ಭಾನುವಾರ ರಜೆ ದಿನವಾಗಿದ್ದರಿಂದ ಅಧ್ಯಕ್ಷರು ಸೋಮವಾರ ಈ ನಿರ್ಧಾರ ಪ್ರಕಟಿಸಿದರು ಎಂದು ಒಕ್ಕೂಟದ ಸಹಾಯಕ ಕಾರ್ಯದರ್ಶಿ ವಿನೋದ್ ತೋಮಾರ್ ಹೇಳಿದ್ದಾರೆ.
ಮಲಿಕ್ ತಪ್ಪಿತಸ್ಥರಾಗಿದ್ದರೆ, ಒಕ್ಕೂಟ ತನ್ನ ವ್ಯಾಪ್ತಿಯಲ್ಲಿ ತಕ್ಕ ಕ್ರಮವನ್ನೇ ಜರುಗಿಸಲಿದೆ. ತನಿಖಾ ವರದಿ ಬಂದ ನಂತರ ಶಿಕ್ಷೆ ಕಾಯಂಗೊಳಿಸುವ ಕುರಿತು ಯೋಚಿಸಲಾಗುವುದು ಎಂದಿದ್ದಾರೆ.